Advertisement

24 ವಾರಗಳ ವರೆಗೆ ಗರ್ಭಪಾತ: ಶೀಘ್ರ ಹೊಸ ಮಾರ್ಗದರ್ಶಿ ಸೂತ್ರ ಪ್ರಕಟ

03:20 PM Aug 01, 2017 | udayavani editorial |

ಹೊಸದಿಲ್ಲಿ : ಅಪರೂಪದಲ್ಲೇ ಅಪರೂಪದ ಪ್ರಕರಣಗಳಲ್ಲಿ  ಗರ್ಭ ಧಾರಣೆಯಾದ 24 ವಾರಗಳ ವರೆಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಅನುಮತಿ ನೀಡುವ ಹೊಸ ಮಾರ್ಗದರ್ಶಿ ಸೂತ್ರಗಳು ಶೀಘ್ರದಲ್ಲೇ ಪ್ರಕಟವಾಗಲಿವೆ. 

Advertisement

ಈಗ ಊರ್ಜಿತದಲ್ಲಿರುವ ಪ್ರಕಾರ ವೈದ್ಯಕೀಯ ಗರ್ಭಪಾತ ಕಾಯಿದೆಯ ಸೆ.5ರ ಪ್ರಕಾರ ತಾಯಿಯ ಜೀವವನ್ನು ಉಳಿಸುವ ತತ್‌ಕ್ಷಣದ ಅಗತ್ಯವನ್ನು ನಿರ್ವಹಿಸುವುದಕ್ಕಾಗಿ 20 ವಾರಗಳ ಅನಂತರದಲ್ಲಿ ಗರ್ಭಪಾತಕ್ಕೆ ಅವಕಾಶವಿದೆ. 

ಪ್ರಧಾನಿ ಕಾರ್ಯಾಲಯದ ಸಲಹೆಯ ಪ್ರಕಾರ 1971ರ ವೈದ್ಯಕೀಯ ಗರ್ಭಪಾತ ಕಾಯಿದೆಗೆ ಈ ಹಿಂದೆ ಸೂಚಿಸಲಾಗಿದ್ದ ತಿದ್ದುಪಡಿಗೆ ಬದಲಾವಣೆಗಳನ್ನು ಕೇಂದ್ರ ಸರಕಾರ ಮಾಡಿದೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಮೊದಲು ವೈದ್ಯಕೀಯ ಗರ್ಭಪಾತದ ಗರಿಷ್ಠ ಅವಧಿಯನ್ನು 20ರಿಂದ 24 ವಾರಗಳಿಗೆ ಏರಿಸುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾವವನ್ನು ಸ್ವೀಕರಿಸಿದ ಬಳಿಕ ಪಿಎಂಓ, ಆರೋಗ್ಯ ಸಚಿವಾಲಯಕ್ಕೆ “ಲಿಂಗಾಯ್ಕೆಯ ಗರ್ಭಪಾತ’ ಕುರಿತಾದ ಪ್ರಶ್ನೆಯನ್ನು ಬಗೆಹರಿಸುವಂತೆ ಸೂಚಿಸಿತ್ತು. 

ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ ಹೋಮಿಯೋಪತಿ ಕ್ಲಿನಿಕ್‌ನಲ್ಲಿ ಡಜನ್‌ಗೂ ಅಧಿಕ ಭ್ರೂಣಗಳು ಪತ್ತೆಯಾದ ಹಿನ್ನೆಲೆಯಲ್ಲಿ  ಅಕ್ರಮ ಗರ್ಭಪಾತದ ಜಾಲವೇ ಕ್ರಿಯಾಶೀಲವಾಗಿರುವುದನ್ನು ಲೆಕ್ಕಿಸಿ ಈ ಸಲಹೆಯನ್ನು ನೀಡಲಾಗಿತ್ತು. 

Advertisement

ಗರ್ಭಧಾರಣೆಯಾದ ಇಪ್ಪತ್ತು ವಾರಗಳ ಬಳಿಕದ ಗರ್ಭಪಾತಕ್ಕೆ ಅನುಕೂಲಿಸುವ “ಗರಿಷ್ಠ ಅವಧಿ ವಿಸ್ತರಣೆ’ಯ ಅವಕಾಶವನ್ನು ಅಪರೂಪದಲ್ಲೇ ಅಪರೂಪ ಎಂಬಂತಹ ಪ್ರಕರಣಗಳಿಗೆ ಮಾತ್ರವೇ ಅನ್ವಯಿಸಬೇಕು ಎಂದು ಆರೋಗ್ಯ ಸಚಿವಾಲಯವು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪರಿಷ್ಕೃತ ಪ್ರಸ್ತಾವದಲ್ಲಿ ಸ್ಪಷ್ಟಪಡಿಸಿದೆ ಎಂದು ಡಿಎನ್‌ಎ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next