Advertisement

ಹೋಟೆಲ್‌, ಮಾಲ್‌ಗ‌ಳಿಗೆ ಹೊಸ ಮಾರ್ಗಸೂಚಿ

05:28 AM Jun 14, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಲಾಕ್‌ಡೌನ್‌ ಸಡಿಲಿಕೆಯಾದ ಬೆನ್ನಲ್ಲೇ ಹೋಟೆಲ್‌ ಹಾಗೂ ರೆಸ್ಟೋರೆಂ ಟ್‌ಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಹೋಟೆಲ್‌ ಉದ್ಯಮಗಳು ಹಾಗೂ ಮಾಲ್‌ಗ‌ಳಿಗೆ ಹೊಸ ಮಾರ್ಗಸೂಚಿಯನ್ನು  ಹೊರಡಿಸಿದ್ದಾರೆ. ಇದರಲ್ಲಿ ಸಾಮಾಜಿಕ ಅಂತರ ಕಾಯ್ದು  ಕೊಳ್ಳುವುದು, ಸ್ಯಾನಿಟೈಸರ್‌ ವ್ಯವಸ್ಥೆ, ಪಾರ್ಕಿಂಗ್‌ ವ್ಯವಸ್ಥೆ ತಾತ್ಕಾಲಿಕ ನಿರ್ಬಂಧ, ಒಟ್ಟು ವಿಸ್ತೀìಣ  ದಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ  ಬಿ.ಎಚ್‌. ಅನಿಲ್‌ಕುಮಾರ್‌ ಆದೇಶಿಸಿದ್ದಾರೆ.

Advertisement

ಎಲ್ಲ ಭಾಗದಲ್ಲೂ ಕೆಲವು ನಿರ್ಬಂಧ ಹೇರುವ ಮೂಲಕ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆಯಾದರೂ, ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ  ಯಾವುದೇ ಹೋಟೆಲ್‌ಗ‌ಳು ತೆರೆಯುವುದಕ್ಕೆ ಅವಕಾಶ ನೀಡಿಲ್ಲ. ಅದೇ ರೀತಿ 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದ ಒಳಗಿನ ಮಕ್ಕಳು ಆರೋಗ್ಯ ಚಿಕಿತ್ಸೆ ಹೊರತುಪಡಿಸಿ ಸರ್ಕಾರದ ನಿರ್ದೇಶನಗಳು  ಹೋಟೆಲ್‌ಗ‌ಳಿಗೂ ಅನ್ವಯವಾಗಲಿದೆ.

ಸಾಮಾಜಿಕ ಅಂತರ: ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ಜನ ಸೇರುವುದು, ಸಭೆ ನಿಷೇಧ. ಮಕ್ಕಳು ಆಟವಾಡುವ ಪ್ರದೇಶ ಹಾಗೂ ಮಾಲ್‌ಗ‌ಳಲ್ಲಿನ ಸಿನಿಮಾ ಮಂದಿರಗಳನ್ನು ಯಾವುದೇ ಕಾರಣಕ್ಕೂ ಪ್ರಾರಂಭಿಸುವಂತಿಲ್ಲ.  ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಕಡ್ಡಾಯ. ಮಾಲ್‌ಗ‌ಳಲ್ಲಿ ಪಾರ್ಕಿಂಗ್‌ ಪ್ರದೇಶ, ಶಾಪಿಂಗ್‌ ಪ್ರದೇಶ ಹಾಗೂ ಪ್ರವೇಶದ್ವಾರ ಸೇರಿದಂತೆ ಎಲ್ಲ ಕಡೆಗಳಲ್ಲೂ ಅಂತರ  ಕಾಯ್ದುಕೊಳ್ಳಬೇಕು.

ಸ್ಯಾನಿಟೈಸರ್‌ ಕಡ್ಡಾಯ: ಹೋಟೆಲ್‌ಗ‌ಳಿಗೆ ಬರುವವರು ಕೈಗಳನ್ನು ಸ್ವತ್ಛಗೊಳಿಸಿಕೊಳ್ಳಲು ಕಡ್ಡಾಯವಾಗಿ ಸ್ಯಾನಿಟೈಸರ್‌, ಸಾಬೂನು ವ್ಯವಸ್ಥೆ ಮಾಡಬೇಕು. ಒಳಗೆ ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್‌ನ ಮೂಲಕ ತಪಾಸಣೆ  ಮಾಡಬೇಕು. ಕುರ್ಚಿ, ಬೆಂಚ್‌ಗಳನ್ನು, ಎಲಿವೇಟರ್‌, ಲಿಫ್ಟ್ಗಳ ಸ್ವೀಚ್‌ಗಳು, ನೆಲ, ಹ್ಯಾಂಡ್‌ ಡ್ರೆçಕ್ಲೀನರ್‌ ಆಗ್ಗಾಗೇ ಸ್ವತ್ಛಗೊಳಿಸುತ್ತಿರಬೇಕು.

ಫ‌ುಡ್‌ಕೋರ್ಟ್‌ಗಳಲ್ಲಿ ಅಂತರ: ಎಲ್ಲರೂ ಊಟ ಮಾಡುವ ಪ್ರದೇಶದಲ್ಲಿ (ಫ‌ುಡ್‌ ಕೋರ್ಟ್‌) ಒಟ್ಟು ಸಾರ್ಮಥ್ಯದ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಕೊಡಬೇಕು. ಇಲ್ಲಿ ಈ  ಪ್ರಮಾಣಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮಾಸ್ಕ್  ಕಡ್ಡಾಯ: ಮಾಸ್ಕ್ ಧರಿಸಿದವರಿಗೆ ಮಾತ್ರ ಹೋಟೆಲ್‌ ಪ್ರವೇಶ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರು ಊಟ, ನೀರು ಸೇವಿಸುವ ವೇಳೆ ಹೊರತುಪಡಿಸಿ, ಉಳಿದ ವೇಳೆ ಮಾಸ್ಕ್ ಬಳಸಲು ಸೂಚಿಸಲಾಗಿದೆ.

Advertisement

ಅನುಮಾನವಿದ್ದರೆ ಕ್ರಮ: ಹೋಟೆಲ್‌ಗ‌ಳಲ್ಲಿ ಯಾರಿಗಾದರೂ ಸೋಂಕು ಇರುವ ಬಗ್ಗೆ ಅನುಮಾನ ವ್ಯಕ್ತವಾದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡುವುದು. ಯಾರಿಗಾದರೂ ಸೋಂಕು ದೃಢಪಟ್ಟರೆ ಸೋಂಕು ದೃಢಪಟ್ಟಾಗ  ಅನುಸರಿಸುವ ಮಾರ್ಗ ಸೂಚಿಯನ್ನು ಅನುಸರಿಸುವುದು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next