Advertisement

ಅಂಗವಿಕಲರಿಗಾಗಿ ನೂತನ ಗೇಮರ್‌

04:37 PM May 25, 2018 | |

ಮೈಕ್ರೋಸಾಫ್ಟ್ ತನ್ನ ಹೊಸ ಎಕ್ಸ್‌ಬಾಕ್ಸ್‌ ನಿಯಂತ್ರಕವನ್ನು ಪರಿಚಯಿಸಿದ್ದು ಅಂಗವಿಕಲರಿಗೆ ಆಡಬಹುದಾದ ಗೇಮ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಎಕ್ಸ್‌ಬಾಕ್ಸ್‌ ನಿಯಂತ್ರಕಕ್ಕೆ ಬ್ಲೂಟೂತ್‌ ಮೂಲಕ ಎಕ್ಸ್ ಬಾಕ್ಸ್‌-ವನ್‌-ಕನ್ಸೋಲ್‌ ಅಥವಾ ವಿಂಡೋಸ್‌ 10 ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿ ಆಟವಾಡಬಹುದು.

Advertisement

ಎಕ್ಸ್‌ಬಾಕ್ಸ್‌ ವಯರ್‌ಲೆಸ್‌ ಸ್ವಿಚ್‌ಗಳು, ಜಾಯ್‌ ಸ್ಟಿಕ್‌ ಮತ್ತು ಮೌಂಟ್ಸ್‌ ಕಂಟ್ರೋಲರ್‌ ಗಳನ್ನು ಹೊಂದಿದೆ. ದೈಹಿಕ ದುರ್ಬಲರನ್ನು ಮಾನಸಿಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ.

ಈ ಸೆಟ್‌ಅಪ್‌ನಲ್ಲಿ ಎರಡು ದೊಡ್ಡ ಬಟನ್‌ ಇದ್ದು ಇದನ್ನು ಕೈಯಲ್ಲಿ ಅಥವಾ ಕಾಲಿನ ಮೂಲಕ ನಿಯಂತ್ರಿಸಬಹುದಾಗಿದೆ. ಮಾತ್ರವಲ್ಲದೆ ಇನ್ನೂ ಪೆಡಲ್‌ ಹಾಗೂ ಇನ್ನಿತರ ಸಾಧನಗಳಿದ್ದು ಇವು ಆಟವನ್ನು ಮತ್ತಷ್ಟು ರಂಜಿಸಲು ಉಪಯೋಗಿಸಬಹುದಾಗಿದೆ. ಇದರ ಉದ್ದೇಶವೇ ಅಂಗವಿಕಲರ ಒಂಟಿತನ ಹಾಗೂ ಖನ್ನತೆಯನ್ನು ಕಳೆದು ಮಾನಸಿಕವಾಗಿ ಸದೃಡರನ್ನಾಗಿ ಮಾಡಲು ಅನ್ವೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next