“ವಾಸ್ತು ಪ್ರಕಾರ’, “ರಾಕೆಟ್’, “ನಡುವೆ ಅಂತರವಿರಲಿ’ ಸಿನಿಮಾಗಳಲ್ಲಿ ನಟಿಸಿದ ನಂತರ ನಟಿ ಐಶಾನಿ ಶೆಟ್ಟಿ, “ಖಾಜಿ’ ಎಂಬ ಕಿರುಚಿತ್ರವನ್ನು ತಾವೇ ನಿರ್ದೇಶನ ಮಾಡಿದ್ದರು. ಆ ಕಿರುಚಿತ್ರಕ್ಕೆ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನು ಸಹ ಐಶಾನಿ ಪಡೆದುಕೊಂಡಿದ್ದರು.
ಈಗ ಐಶಾನಿ “ಹೊಂದಿಸಿ ಬರೆಯಿರಿ’ ಮತ್ತು “ಧರಣಿ ಮಂಡಲ ಮಧ್ಯದೊಳಗೆ’ ಎಂಬ ಸಿನಿಮಾಗಳಲ್ಲಿ ಎರಡು ಸಿನಿಮಾಗಳ ಮೂಲ ಬ್ಯಾಕ್ ಟು ಬ್ಯಾಕ್ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಅಂದಹಾಗೆ ಈ ಎರಡೂ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳಿದ್ದು, ಪ್ರೇಕ್ಷಕರಿಗೂ ತನ್ನ ಪಾತ್ರಗಳು ಇಷ್ಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಐಶಾನಿ ಶೆಟ್ಟಿ.
‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ನಾನು ಮೂರು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಸನಿಹ ಎಂಬ ಮೆಕ್ಯಾನಿಕಲ್ ಎಂಜಿನಿಯರ್ ವಿದ್ಯಾರ್ಥಿನಿಯ ಪಾತ್ರ ಅದಾಗಿದ್ದು, 12 ವರ್ಷದ ಬದುಕನ್ನು ಅದು ತೋರಿಸುತ್ತದೆ” ಎನ್ನುತ್ತಾರೆ ಐಶಾನಿ. ‘ಹೊಂದಿಸಿ ಬರೆಯಿರಿ’ ಚಿತ್ರವನ್ನು ಜಗನ್ನಾಥ್ ರಾಮೇನಹಳ್ಳಿ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:ಗಂಗಾವತಿ: ‘ಜೇಮ್ಸ್’ ಸ್ವಾಗತಕ್ಕೆ ಅಭಿಮಾನಿಗಳಿಂದ ಭರ್ಜರಿ ಸಿದ್ಧತೆ
‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ಪಾತ್ರಕ್ಕೂ ನನ್ನ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿ, ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಮಾತನಾಡುವಂತಹ ಪಾತ್ರವದು. ಈ ಪಾತ್ರ ನಿರ್ವಹಿಸಿದ್ದು ನನಗೆ ಹೊಸ ಅನುಭವ ನೀಡಿದೆ’ ಎಂದು ಹೇಳಿದ್ದಾರೆ ಐಶಾನಿ.