Advertisement
ಆಳಂದ ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ಶಿಕ್ಷಣ ಮತ್ತು ಸಮಾಜ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಶಿಕ್ಷಣ ನೀತಿ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ವರ್ಚುವಲ್ ಮೂಲಕ ಅವರು ದಿಕ್ಸೂಚಿ ಭಾಷಣ ಮಾಡಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಾಗಿ ಒಂದು ವರ್ಷ ಕಳೆದಿದ್ದು, ಈಗ ಅನುಷ್ಠಾನದ ಸುಸಂದರ್ಭ ಬಂದಿದೆ. ಜತೆಗೆ ಈ ನೀತಿ ಯಾಕೆ ಅಗತ್ಯವಾಗಿದೆ? ಇದರಲ್ಲಿ ಏನೇನಿರಲಿದೆ ಎನ್ನುವ ಕುತೂಹಲಕ್ಕೂ ತೆರೆ ಬಿದ್ದಿದೆ. ಇದೀಗ ಇದನ್ನು ಹೇಗೆ ಅನುಷ್ಠಾನ ಮಾಡಬೇಕು ಎನ್ನುವ ಬಗ್ಗೆ ಯೋಚನೆ ಮತ್ತು ಯೋಜನೆ ರೂಪಸಬೇಕಿದೆ ಎಂದರು.
Related Articles
Advertisement
ಸದ್ಯ ಕಲಾ ವಿಷಯಗಳಲ್ಲಿ ಓದಿದ ಶೇ.20ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ಸಿಗುವಂತ ಮತ್ತು ಐಐಟಿ ಅಭ್ಯಾಸ ಮಾಡಿದ ಯುವಕರು ಆತ್ಮಹತ್ಯೆಗೆ ಶರಣವಾಗುವ ಪರಿಸ್ಥಿತಿ ಇದೆ. ಆದ್ದರಿಂದ ಹೊಸ ಶಿಕ್ಷಣ ನೀತಿ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಅಗತ್ಯವಾಗಿ ಆಗಬೇಕು. ರಾಜ್ಯದ ಬೇರೆ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಸರಾಸರಿ ವಯಸ್ಸು 50 ಇದ್ದರೆ, ನಮ್ಮ ಬೋಧಕ ಸಿಬ್ಬಂದಿಯ ವಯಸ್ಸು 35ರಿಂದ 40 ಇದೆ. ಯುವ ಬೋಧಕರೇ ಹೆಚ್ಚಿದ್ದು, ನಮ್ಮಲ್ಲಿ ಮೂಲ ಸೌಕರ್ಯಗಳು ಇರುವುದರಿಂದ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ| ಬಸವರಾಜ ಡೋಣೂರ, ಬೆಂಗಳೂರಿನ ಶಿಕ್ಷಣ ಮತ್ತು ಸಮಾಜ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಗೌರೀಶ, ಪ್ರೊ| ಚನ್ನ ವೀರ ಆರ್.ಎಂ. ಮಾತನಾಡಿದರು. ಎನ್‌ಇಪಿ ಕಾರ್ಯಾಗಾರದ ಮುಖ್ಯಸ್ಥ ಪ್ರೊ| ಅಳಗವಾಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಗಾರದಲ್ಲಿ ಸಿಯುಕೆ ವಿವಿಧ ನಿಕಾಯಗಳ ಡೀನ್‌ಗಳು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.
ನೂತನ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಯುಜಿಸಿ ಅಗತ್ಯ ನೆರವು ನೀಡುವುದಾಗಿ ಹೇಳಿದೆ. ಜತೆಗೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ತಿಳಿಸಿದೆ. ಮುಂದಿನ ಕೆಲ ತಿಂಗಳಲ್ಲೇ ಹೊಸ ನೀತಿಯ ಅನ್ವಯ ಪಠ್ಯಕ್ರಮ ರಚಿಸಿ, ಬೋಧಿ ಸಲಾಗುವುದು.ಪ್ರೊ| ಬಿ.ಸತ್ಯನಾರಾಯಣ,
ಕುಲಪತಿ, ಸಿಯುಕೆ ನೂತನ ಶಿಕ್ಷಣ ನೀತಿ ಈಗಾಗಲೇ ಒಂದು ನೀಲಿನಕ್ಷೆ ಸಿದ್ಧಪಡಿಸಿದೆ. ಅದಕ್ಕೆ ಅಗತ್ಯವಾದ ಪೂರಕ ಅಂಶ ಮತ್ತು ಮಾದರಿಗಳನ್ನು ಸೇರಿಸುವ ಜವಾಬ್ದಾರಿ ಸಿಯುಕೆಗೆ ಇದೆ. ಕೆಲ ಮಾದರಿಗಳು ಆರಂಭದಲ್ಲಿ ಯಶಸ್ಸು ಆಗದೇ ಹೋದರೂ, ಅದರಿಂದ ಹೊಸ ಪಾಠ ಕಲಿಯಬಹುದು.
ಪ್ರೊ| ಎಂ.ಕೆ.ಶ್ರೀಧರ್,
ಸದಸ್ಯರು, ಯುಜಿ