Advertisement

ನೂತನ ಶಿಕ್ಷಣ ನೀತಿಯಿಂದ ಅಪಾಯವೇ ಜಾಸ್ತಿ

02:03 PM Nov 11, 2021 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ತರಾತುರಿಯಲ್ಲಿಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣನೀತಿಯಿಂದ ಎಲ್ಲರಿಗೂ ತೊಂದರೆ ಆಗಲಿದೆ ಎಂದುವಿದ್ಯಾರ್ಥಿ ಕಾಂಗ್ರೆಸ್‌ (ಎನ್‌ಎಸ್‌ಯುಐ) ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್‌ ಆರೋಪಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಇಡೀಶಿಕ್ಷಣ ಕ್ಷೇತ್ರದ ನೇರ ಖಾಸಗೀಕರಣಕ್ಕೆ ಅವಕಾಶಮಾಡಿಕೊಡಲಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂಬಹಳ ತೊಂದರೆಗೆ ಕಾರಣವಾಗಲಿದೆ ಎಂದರು.

ಶಿಕ್ಷಣ ದೊರೆತರೆ ತಾನೇ ವಿದ್ಯಾರ್ಥಿ, ಜನಸಮುದಾಯ ಪ್ರಶ್ನಿಸುವುದು. ವಿದ್ಯೆಯನ್ನೇ ಕಿತ್ತುಕೊಂಡರೆಪ್ರಶ್ನೆ ಮಾಡುವವರೇ ಇಲ್ಲದಂತಾಗುತ್ತಾರೆ ಎಂದುಶಿಕ್ಷಣವನ್ನೇ ಕಿತ್ತುಕೊಳ್ಳುವ ಉದ್ದೇಶದಿಂದ ನೂತನನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಲೋಪದೋಷಗಳ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆತಲುಪಿಸುವ ಉದ್ದೇಶದಿಂದ ಎನ್‌ಎಸ್‌ಯುಐಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ದಾವಣಗೆರೆ ಸೇರಿದಂತೆರಾಜ್ಯದಾದ್ಯಂತ ಪೊಲೀಸ್‌, ಅಧಿಕಾರಿ ವರ್ಗವನ್ನುಬಳಸಿಕೊಂಡು ಅವಕಾಶವನ್ನೇ ನೀಡುತ್ತಿಲ್ಲ. ದಾವಣಗೆರೆಸೇರಿದಂತೆ ಎನ್‌ಎಸ್‌ಯುಐ ನೂತನ ರಾಷ್ಟ್ರೀಯ ಶಿಕ್ಷಣನೀತಿಯಲ್ಲಿನ ಲೋಪ ದೋಷಗಳ ಬಗ್ಗೆ ವಿದ್ಯಾರ್ಥಿಸಮುದಾಯಕ್ಕೆ ತಲುಪಿಸುವ ಕೆಲಸ ಮಾಡಲಿದೆ ಎಂದುತಿಳಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ರμàಕ್‌ ಅಲಿಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ನಾಮ್‌ ಬದಲೋಸರ್ಕಾರ್‌ ಆಗಿದೆ.

ಹಿಂದಿನ ಯೋಜನೆಗಳ ಹೆಸರುಬದಲಾಯಿಸಿ ಜಾರಿಗೆ ತರುತ್ತಿರುವಂತೆ ಶಿಕ್ಷಣ ಕ್ಷೇತ್ರದಲ್ಲೂಮಾಡುತ್ತಿದೆ. ನಮ್ಮ ಆಡಳಿತಾವಧಿಯಲ್ಲಿ ಬದಲಾವಣೆಮಾಡಲಾಗಿದೆ, ಹೊಸ ನೀತಿ ಜಾರಿಗೆ ತರಲಾಗಿದೆ ಎಂದುಹೇಳಿಕೊಳ್ಳಲು ಈ ಕೆಲಸ ಮಾಡಲಾಗುತ್ತಿದೆ. ಈಗ ಆನ್‌ಲೈನ್‌ ಯುಗದಲ್ಲಿ ಇದ್ದೇವೆ. ಆದರೆ ನೂತನ ರಾಷ್ಟ್ರೀಯಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯವನ್ನು ಹಿಂದಕ್ಕೆಕರೆದೊಯ್ಯುವಂತೆ ಇದೆ. ನೂತನ ರಾಷ್ಟ್ರೀಯ ಶಿಕ್ಷಣನೀತಿಯ ಬಗ್ಗೆ ಸಂಸತ್‌ನಲ್ಲಿ ಚರ್ಚೆಯೇ ಆಗಿಲ್ಲ ಎಂದುಅಸಮಾಧಾನ ವ್ಯಕ್ತಪಡಿಸಿದರು.

Advertisement

ಒಟ್ಟಾರೆ ಇಡೀ ಶಿಕ್ಷಣ ಕ್ಷೇತ್ರವನ್ನೇ ಖಾಸಗೀಕರಣಮಾಡಿ ಹಣ ಕೊಳ್ಳೆ ಹೊಡೆಯುವ ಏಕೈಕ ಉದ್ದೇಶದಿಂದನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ.ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತೆಯೇ ಇಲ್ಲ.ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಶಿಕ್ಷಕ ವರ್ಗದಅಭಿಪ್ರಾಯವನ್ನೂ ಕೇಳದೆ ಏಕಾಏಕಿ ಜಾರಿಗೆತರಲಾಗಿದೆ. ತ್ರಿ ಭಾಷಾ ಸೂತ್ರದಡಿ ಹಿಂದಿ ಹೇರುವ ಕೆಲಸ ಮಾಡಲಾಗುತ್ತಿದೆ.

ವಿದ್ಯಾರ್ಥಿವೇತನ ಇತರೆ ಸೌಲಭ್ಯಗಳಬಗ್ಗೆ ಮಾತನಾಡುತ್ತಲೇ ಇಲ್ಲ. ಮಧ್ಯಂತರದಲ್ಲೇ ಶಿಕ್ಷಣಮೊಟಕುಗೊಳಿಸುವ ಅವಕಾಶ ನೀಡುವ ಮೂಲಕ ಬಡವರ್ಗದ ವಿದ್ಯಾರ್ಥಿಗಳು ಪದವಿ ಪಡೆಯುವುದನ್ನುತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಅಲಿ ರಹಮತ್‌,ಶಶಿಧರ ಪಾಟೀಲ್‌, ಸುನೀಲ್‌, ಭರತ್‌, ಮನು,ತಾಹೀರ್‌, ಸುಹೇಲ್‌, ಹುಸೇನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next