ನವದೆಹಲಿ: ಭಾರತದಲ್ಲಿ 2023ರ G20 ಶೃಂಗಸಭೆ ಇಂದು ದೆಹಲಿಯಲ್ಲಿ ಮುಕ್ತಾಯಗೊಂಡಿದೆ. ಮುಂದಿನ ವರ್ಷದ ಶೃಂಗಸಭೆಯ ಅಧ್ಯಕ್ಷತೆಯನ್ನು ಬ್ರೆಜಿಲ್ ವಹಿಸಿಕೊಳ್ಳಲಿದೆ. G20 ದೇಶಗಳ 19 ನೇ ಶೃಂಗಸಭೆಯನ್ನು 2024 ರಲ್ಲಿ ಬ್ರೆಜಿಲ್‌ನ ರಾಜಧಾನಿ ರಿಯೊ ಡಿ ಜನೈರೊದಲ್ಲಿ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಧಿಕೃತವಾಗಿ ಬ್ರೆಜಿಲ್‌ಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ್ದಾರೆ.
ಕಳೆದ ವರ್ಷ ಜಿ 20 ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಮುಂದಿನ ವರ್ಷ ಜಿ-20 ಶೃಂಗಸಭೆ ಆಯೋಜಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರು ಭಾನುವಾರ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಾ ಒಂದು ಸಸಿಯನ್ನು ಹಸ್ತಾಂತರಿಸಿದರು. ಜಿ20 ಶೃಂಗಸಭೆಯ ಮೂರನೇ ಅಧಿವೇಶನದ ಆರಂಭದಲ್ಲಿ ಸಾಂಕೇತಿಕ ಸಮಾರಂಭ ನಡೆಯಿತು.
ಮೊದಲು ವಿಡೋಡೋ ಅವರು ಪ್ರಧಾನಿ ಮೋದಿ ಅವರಿಗೆ ಸಸಿ ಹಸ್ತಾಂತರಿಸಿದರು ಬಳಿಕ ಬ್ರಝಿಲ್ ಲುಲಾ ಡ ಸಿಲ್ವಾ ಅವರು ಪ್ರಧಾನಿಗೆ ಸಸಿಯನ್ನು ನೀಡಿದರು. ಈ ಮೂಲಕ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ಗೆ ಹಸ್ತಾಂತರಿಸುವುದರೊಂದಿಗೆ ಜಿ20 ನಾಯಕರ ಶೃಂಗಸಭೆಯು ಇಂದು ಮಧ್ಯಾಹ್ನ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: CCB Police: ಸಿಸಿಬಿ ಪೊಲೀಸರ ದಾಳಿ ವೇಳೆ ನಶೆಯಲ್ಲಿ ತೇಲುತ್ತಿದ್ದ ಅಪ್ರಾಪ್ತರು