ಆಂಧ್ರಪ್ರದೇಶ: ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗಾಗಲೇ ಹಲವು ಮಹತ್ವದ ದಾಖಲೆ ಸಾಧಿಸಿರುವ ಭಾರತ ಶುಕ್ರವಾರ (ನವೆಂಬರ್ 18) ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹೈದರಾಬಾದ್ ಖಾಸಗಿ ಕಂಪನಿ ಸ್ಕೈರೂಟ್ ಏರೋಸ್ಪೇಸ್ ನಿರ್ಮಾಣ ಮಾಡಿದ “ವಿಕ್ರಂ-ಎಸ್” ಹೆಸರಿನ ರಾಕೆಟ್ ಅನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ.
ಇದನ್ನೂ ಓದಿ:ಚಾರ್ಮಾಡಿ ಘಾಟ್ ನಲ್ಲಿ ಹಂದಿಗಳ ಕಳೇಬರ ಎಸೆದು ಹೋದ ಕಿಡಿಗೇಡಿಗಳು
2020ರಲ್ಲಿ ಕೇಂದ್ರ ಸರ್ಕಾರ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿತ್ತು. ಚೆನ್ನೈಯಿಂದ 115 ಕಿಲೋ ಮೀಟರ್ ದೂರದಲ್ಲಿರುವ ಶ್ರೀಹರಿಕೋಟಾದಿಂದ ವಿಕ್ರಮ್ ಎಸ್ ರಾಕೆಟ್ ಅನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ನೆಟ್ಟಿದೆ.
ವಿಕ್ರಮ್ ರಾಕೆಟ್ ವಿಶೇಷತೆ:
ವಿಕ್ರಮ್ ಎಸ್ ರಾಕೆಟ್ ಆರು ಮೀಟರ್ ಎತ್ತರ ಹೊಂದಿದೆ. ಭಾರತದ ಎರಡು ಮತ್ತು ವಿದೇಶದ ಒಂದು ಪೇ ಲೋಟ್ ಗಳನ್ನು ಇದು ಹೊಂದಿದೆ. ದೇಶದ ಬಾಹ್ಯಾಕಾಶ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಿದ ಖ್ಯಾತ ವಿಜ್ಞಾನಿ ಡಾ.ವಿಕ್ರಮ್ ಸಾರಾಭಾಯ್ ಹೆಸರನ್ನು ಈ ರಾಕೆಟ್ ಗೆ ಇಡಲಾಗಿದೆ. ವಿಕ್ರಮ್ ಎಸ್ ರಾಕೆಟ್ ಸಿಂಗಲ್ ಎಂಜಿನ್ ಹೊಂದಿದ್ದು, 815 ಕೆಜಿವರೆಗೆ ಇರುವ ಉಪಗ್ರಹಗಳನ್ನು ಹೊತ್ತೊಯ್ಯಲಿದೆ.