Advertisement

ಹೊಸ ಬಸ್‌ ನಿಲ್ದಾಣ,ಬಹು ಅಂತಸ್ತಿನವಾಹನ ಪಾರ್ಕಿಂಗ್‌ ಕಾಮಗಾರಿ

05:04 PM Mar 25, 2018 | Team Udayavani |

ಪಂಪ್‌ ವೆಲ್‌ ನಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣ ಯೋಜನೆ ಪ್ರಸ್ತಾವವಾಗಿ ಹಲವು ವರ್ಷಗಳೇ ಕಳೆದಿವೆ. ಇದಕ್ಕಾಗಿ 7.23 ಎಕ್ರೆ ಜಾಗವನ್ನೂ ಸ್ವಾಧೀನಪಡಿಸಲಾಗಿದೆ. ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಇತ್ತೀಚೆಗೆ ನಡೆದ ಸ್ಮಾರ್ಟ್ ಸಿಟಿ ಎಸ್‌ ವಿಪಿ ಸಭೆಯಲ್ಲಿ ಬಸ್‌ ನಿಲ್ದಾಣ ಸ್ಥಾಪನೆಗೆ ಹಸುರು ನಿಶಾನೆ ಸಿಕ್ಕಿದೆ. ಹೀಗೆಯೇ ಹಲವು ಬಾರಿ ಪಂಪ್‌ ವೆಲ್‌ ನಲ್ಲಿ ಹೊಸ ನಿಲ್ದಾಣ ಆಗುವ ಬಗ್ಗೆ ಜನತೆಯು ಎಲ್ಲ ಕನಸು ಕಂಡದ್ದೇ ಬಂತು. ಆದರೆ ಈ ಬಾರಿಯಾದರೂ ಇದು ನನಸಾಗುವುದೋ ಕಾದುನೋಡಬೇಕು.

Advertisement

ನಮ್ಮ ಮಂಗಳೂರು ನಗರದ ಹೃದಯ ಭಾಗದಲ್ಲಿನ ಹಂಪ ನಕಟ್ಟೆಯುದ್ದಕ್ಕೂ ಅವೆಷ್ಟೋ ಸಿಟಿ, ಸರ್ವಿಸ್‌ ಬಸ್‌ ಗಳಲ್ಲದೇ ಇತರ ವಾಹನಗಳ ಸಂಚಾರ ದಟ್ಟಣೆಯಿಂದಾಗಿ ಯಾವಾಗಲೂ ಟ್ರಾಫಿಕ್‌ ಜಾಮ್‌, ಸಾರ್ವಜನಿಕರಿಗೆ ಅನಾನುಕೂಲ ಹೀಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸುವ ಪರಿಸ್ಥಿತಿ ಇದೆ. ಈ ಬಾರಿಯಾದರೂ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ ಖಂಡಿತವಾಗಿಯೂ ನಿರ್ಮಾಣವಾಗ ಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.

ಅಂತೆಯೇ ಹಂಪನ ಕಟ್ಟೆ ಹಳೆ ಬಸ್‌ ನಿಲ್ದಾಣದ ಜಾಗದಲ್ಲಿ ಬಹು ಅಂತಸ್ತಿನ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣ ಯೋಜನೆ ಪ್ರಸ್ತಾವಕ್ಕೆ ದಶಕ ಕಳೆದರೂ ಜಿಲ್ಲಾಡಳಿತ ಹಾಗೂ ಮನಪಾ ಮುತುವರ್ಜಿವಹಿಸಿಲ್ಲ. ಆಗೊಂದು, ಈಗೊಂದು ಬಾರಿ ಚರ್ಚಿಸಿ ಎಲ್ಲರೂ ಸುಮ್ಮನಾಗುತ್ತಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಪ್ರಸ್ತಾವವೂ ನಡೆದು ಈ ಎರಡೂ ಯೋಜನೆಗಳು ಶೀಘ್ರದಲ್ಲೇ ಕಾರ್ಯಾರಂಭಗೊಂಡರೆ ಮಂಗಳೂರು ನಗರದೊಳಗೆ ವಾಹನ ದಟ್ಟಣೆ, ಟ್ರಾಫಿಕ್‌ ಜಾಮ್‌ ಕಿರಿಕಿರಿಗೆ ಮುಕ್ತಿ ದೊರೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next