ಬಂಗಾರಪೇಟೆ: 30 ವರ್ಷಗಳ ಇತಿಹಾಸದಲ್ಲಿ ಹುಲಿಬೆಲೆ ಮತ್ತು ಡಿ.ಕೆ.ಹಳ್ಳಿ ಗ್ರಾಪಂಗಳಿಗೆ ಸ್ವಂತ ಕಟ್ಟಡ ಭಾಗ್ಯವಿಲ್ಲದೇ ಅವ್ಯವಸ್ಥೆಯಿಂದ ಕೂಡಿದ್ದು, ಪ್ರಸ್ತುತ ತಲಾ 40 ಲಕ್ಷ ರೂ.ವೆಚ್ಚದಲ್ಲಿ ಮಾದರಿ ಕಟ್ಟಡ ನಿರ್ಮಾಣ ಮಾಡುವ ಮೂಲಕ ಬಹು ವರ್ಷಗಳ ಕನಸು ನನಸಾಗಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಹುಲಿಬೆಲೆ ಮತ್ತು ಡಿಕೆಹಳ್ಳಿ ಗ್ರಾಪಂಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದಅವರು,
ತಾಲೂಕಿನ ಎಲ್ಲಾ ಗ್ರಾಪಂಗಳು ಸ್ವಂತ ಕಟ್ಟಡ ಹೊಂದಬೇಕೆಂಬುದು ನನ್ನಕನಸಾಗಿದೆ. ಡಿಸೆಂಬರ್‌ನಲ್ಲಿ ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, ಜನವರಿಯೊಳಗೆ ಕಟ್ಟಡ ಕಾಮಗಾರಿ ಸಪೂರ್ಣಗೊಳ್ಳಲಿದ್ದು, ಹೊಸ ಕಟ್ಟಡದಲ್ಲೇ ಹೊಸ ಆಡಳಿತ ಮಂಡಳಿ ಕಾರ್ಯ ಚಟುವಟಿಕೆಗಳನ್ನುನಡೆಸಲಿ ಎಂದರು.
15 ದಿನದಲ್ಲಿಕಾಮಗಾರಿ ಆರಂಭ: ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಾಲೂರು ತಾಲೂಕು ನೂಟವೆಯಿಂದ ಬಂಗಾರಪೇಟೆ ಪಟ್ಟಣವರೆಗೂ 30 ಅಡಿ ಅಗಲ ರಸ್ತೆ ನಿರ್ಮಾಣಕ್ಕೆ 10 ಕೋಟಿ ಮಂಜೂರು ಮಾಡಿತ್ತು. ಅದೇ ರೀತಿ ಹೊಸಕೋಟೆಯಿಂದ ಆಂಧ್ರಪ್ರದೇಶದ ವಿ.ಕೋಟೆವರೆಗೂ ರಸ್ತೆ ಅಗಲೀಕರಣಕ್ಕೆ 100ಕೋಟಿ ಮಂಜೂರು ಮಾಡಲಾಗಿತ್ತು. ಬಿಜೆಪಿಸರ್ಕಾರ ಅನುದಾನ ಹಿಂಪಡೆದಿದ್ದರಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಅನುದಾನ ಮಂಜೂರಾಗಿರುವುದರಿಂದ 15 ದಿನದೊಳಗೆ ಕಾಮಗಾರಿ ಆರಂಭವಾಗಲಿದೆ ಎಂದರು.
ಡಿ.ಕೆ.ಹಳ್ಳಿ ಗ್ರಾಪಂನಲ್ಲಿ ಅತಿ ಹೆಚ್ಚು ಮನೆ ತೆರಿಗೆ ವಸೂಲಿಯಾಗಿರುವುದರಿಂದ ಗ್ರಾಪಂಗೆ ಸ್ವಂತವಾಗಿ ನೂತನ ಟ್ರ್ಯಾಕ್ಟರ್ ಖರೀದಿ ಮಾಡಿದ್ದು, ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪೈಪ್‌ಗ್ಳನ್ನು ಸಾಗಾಣಿಕೆ ಮಾಡಲು ಹೆಚ್ಚು ಅನುಕೂಲವಾಗಿರುವುದರಿಂದ ಈ ಟ್ರ್ಯಾಕ್ಟರ್‌ರನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿಚಾಲನೆ ನೀಡಿ ಲೋಕಾರ್ಪಣೆ ಮಾಡಿದರು.ಜಿಪಂ ಸದಸ್ಯ ಬಿ.ವಿ.ಮಹೇಶ್, ತಾಪಂ ಅಧ್ಯಕ್ಷ ಟಿ.ಮಹಾದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಕೆ.ವಿ.ನಾಗರಾಜ್, ಭೂ ಬ್ಯಾಂಕ್‌ನ ಅಧ್ಯಕ್ಷ ಎಚ್. ಕೆ.ನಾರಾಯಣಸ್ವಾಮಿ, ತಾಪಂ ಇಒ ಎನ್.ವೆಂಕಟೇಶಪ್ಪ, ಜಿಪಂ ಇಇ ಶೇಷಾದ್ರಿ, ಎಇ ರವಿಚಂದ್ರನ್, ಹುಲಿಬೆಲೆ ವಿಎಸ್‌ಎಸ್‌ಎನ್ ಅಧ್ಯಕ್ಷ ವೆಂಕಟೇಶ್, ಟಿಎಪಿಸಿಎಂಎಸ್ ಹಾಲಿ ನಿರ್ದೇಶಕ ವೆಂಕಟಾಚಲಪತಿ, ಮಾಜಿ ಅಧ್ಯಕ್ಷ ಆರ್ .ವಿ.ಸುರೇಶ್, ಪತ್ರಬರಹಗಾರ ರಾಮಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ಅಮರಪ್ಪ, ದೊಡ್ಡೊರು ಕೃಷ್ಣಯ್ಯ, ಯರ್ರನಾಗನಹಳ್ಳಿ ಗೋವಿಂದಪ್ಪ,ವಿಶ್ವನಾಥ್,ಭಾರತ್‌ನಗರಸುರೇಶ್,ಪಿಡಿಒಗಳಾದ ಹುಲಿಬೆಲೆ ಶ್ರೀನಿವಾಸರೆಡ್ಡಿ, ಡಿ.ಕೆ.ಹಳ್ಳಿ ಪಿಡಿಒ ವಸಂತ್‌ಕುಮಾರ್, ಹುಲಿಬೆಲೆ ಕಾರ್ಯದರ್ಶಿ ಶಿವು ಮುಂತಾದವರು ಹಾಜರಿದ್ದರು.