Advertisement
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ಸಭೆ ನಡೆಸಿ, ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಲಾಗಿದೆ. ಕರ್ನಾಟಕ ಮುನಿಸಿಪಲ್ ಆಕ್ಟ್ (ಕೆಎಂಸಿ ಕಾಯ್ದೆ) ವ್ಯಾಪ್ತಿಯಿಂದ ಬಿಬಿಎಂಪಿಯನ್ನು ಹೊರಗೆ ತಂದು ಪ್ರತ್ಯೇಕ ಕಾಯ್ದೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯ ನಂತರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, 2021ರಲ್ಲಿ ಹೊಸ ಜನಗಣತಿ ಬಂದರೆ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತದೆ. ಅದರ ಆಧಾರದ ಮೇಲೆ ಬಿಬಿಎಂಪಿ ಚುನಾವಣೆ ನಡೆಸುವುದು ಮತ್ತಷ್ಟು ವಿಳಂಬ ಆಗಬಹುದು. ಹಾಗಾಗೀ ಸುಪ್ರೀಂ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದರು.
Related Articles
Advertisement
ನ್ಯಾಯಾಂಗದ ಜತೆ ಶಾಸಕಾಂಗ ಸಂಘರ್ಷ? :
ಜಂಟಿ ಪರಿಶೀಲನೆ ಸಭೆಯಲ್ಲಿ ಬಿಬಿಎಂಪಿ ಕಾಯ್ದೆ-2020ಗೆ ಒಪ್ಪಿಗೆ ಪಡೆದಿದ್ದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಮಿತಿಗೆ ನೀಡಲಾಗಿದೆ. ಕಾನೂನು ತಜ್ಞರ ಸಲಹೆ ಪಡೆದ ನಂತರ ಇದೇ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲು ತೀರ್ಮಾನಿ ಸಲಾಗಿದೆ. ಆ ನಂತರ ಸುಪ್ರೀಂ ಕೋರ್ಟ್‌ಗೆಮೇಲ್ಮನವಿ ಸಲ್ಲಿಸುವ ವೇಳೆ ಮಾಹಿತಿ ನೀಡಲು ನಿರ್ಧರಿಸ ಲಾಗಿದೆ. ಹೈಕೋರ್ಟ್ ಈಗಾಗಲೇ ನಾಲ್ಕು ವಾರಗಳಲ್ಲಿ ಮೀಸಲಾತಿ ಪ್ರಕಟಿಸಿ ಆರು ವಾರಗಳಲ್ಲಿ ಚುನಾವಣೆ ನಡೆಸಲು ಸೂಚಿಸಿದ್ದರೂ ರಾಜ್ಯ ಸರ್ಕಾರ ಅದನ್ನು ಪಾಲಿಸದೆ ಸುಪ್ರೀಂಕೋರ್ಟ್ ಮೊರೆ ಹೋಗಲು ಮುಂದಾಗಿರುವುದು ನ್ಯಾಯಾಂಗದ ಜತೆ ಸಂಘರ್ಷಕ್ಕೆ ಇಳಿದಂತೆ ಎಂಬ ಮಾತುಗಳು ಕೇಳಿಬರುತ್ತಿವೆ.198ವಾರ್ಡ್‌ಗಳಿಗೆಸೀಮಿತವಾಗಿಚುನಾವಣೆ ನಡೆಸಿ ವಾರ್ಡ್ ಹೆಚ್ಚಳ ಆನಂತರಮಾಡಿ ಎಂದು ನ್ಯಾಯಾಲಯ ಹೇಳಿದ್ದರೂ ಹೇಗಾದರೂಮಾಡಿಚುನಾವಣೆಮುಂದೂಡಲು ಬಿಬಿಎಂಪಿ ಕಾಯ್ದೆ-2020 ತರಲು ನಿರ್ಧರಿಸಿದೆ. ಹೈಕೋರ್ಟ್ ಆದೇಶ ಪಾಲನೆ ಮಾಡದಿದ್ದರೆ ನ್ಯಾಯಾಂಗ ಉಲ್ಲಂಘಟನೆಯಾಗಲಿದೆ. ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನೆಡೆಯಾದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ ಎಂದುಹೇಳಲಾಗುತ್ತಿದೆ.