ಹೊಸದಿಲ್ಲಿ: ನಿಗದಿತ ಪ್ರಮಾಣದ ಬ್ಯಾಲೆನ್ಸ್ ಅನ್ನು ಖಾತೆಯಲ್ಲಿ ಉಳಿಸಲು ಸಾಧ್ಯವಾಗದವರಿಗಾಗಿ ಇದೀಗ ಬ್ಯಾಂಕ್‌ಗಳು ಶೂನ್ಯ ಬ್ಯಾಲೆನ್ಸ್‌ನ ಉಳಿ ತಾಯ ಖಾತೆಗಳನ್ನು ಪರಿಚಯಿ ಸಿವೆ. ಇದರಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಯಾಂಕ್‌ಗಳು ಶುಲ್ಕ ವಿಧಿಸುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಎಸ್‌ಬಿಐ ಹಾಗೂ ಖಾಸಗಿ ಬ್ಯಾಂಕ್ ಎಚ್‌ಡಿಎಫ್ಸಿ ಸಹಿತ ಹಲವು ಬ್ಯಾಂಕ್‌ಗಳು ಈ ವಿಧದ ಖಾತೆ ಸೌಲಭ್ಯವನ್ನು ಹೊಂದಿವೆ. ಸಾಮಾನ್ಯ ಉಳಿತಾಯ ಖಾತೆಯಲ್ಲಿರುವ ಎಲ್ಲ ಸೌಲಭ್ಯಗಳು ಇದರಲ್ಲಿ ಇರುತ್ತವೆ.
ಬಡ್ಡಿ ದರವು 1 ಕೋಟಿ ರೂ.ವರೆಗಿನ ಬ್ಯಾಲೆನ್ಸ್‌ಗೆ ಶೇ. 3.50 ಮತ್ತು 1 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಶೇ.4 ಇರಲಿದೆ.
ಇತ್ತೀಚೆಗಷ್ಟೇ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿರುವ ಗ್ರಾಹಕರಿಗೆ ಶುಲ್ಕ ವಿಧಿಸುವ ಬ್ಯಾಂಕ್‌ಗಳ ನಿರ್ಧಾರ ತೀವ್ರ ಆಕ್ಷೇಪಕ್ಕೆ ಈಡಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಈ ಹೊಸ ವಿಧಾನದ ಖಾತೆಗಳನ್ನು ತೆರೆಯುವ ಅವಕಾಶವನ್ನು ಗ್ರಾಹಕರಿಗೆ ಒದಗಿಸಿವೆ.