Advertisement

ಮತ್ತೆ 33 ಹೊಸ ಸೋಂಕಿತರು: 1743ಕ್ಕೇರಿದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ

06:08 PM May 22, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಮತ್ತೆ 33 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಇದರೊಂದಿಗೆ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 138 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಈ 33 ಪ್ರಕರಣಗಳ ಪೈಕಿ 27 ಜನರು ಮಹಾರಾಷ್ಟ್ರದಿಂದ ಹಿಂತುರಿಗಿದವರಾಗಿದ್ದಾರೆ.

Advertisement

ಹೊಸ 33 ಸೋಂಕು ಪ್ರಕರಣಗಳಲ್ಲಿ ಹತ್ತು ಪ್ರಕರಣಗಳು ರಾಯಚೂರಿನಲ್ಲಿ ದೃಢವಾಗಿದ್ದರೆ, ಮಂಡ್ಯ ಮತ್ತು ವಿಜಯಪುರದಲ್ಲಿ ತಲಾ ಐದು ಪ್ರಕರಣಗಳು ಪತ್ತೆಯಾಗಿದೆ. ಉಳಿದಂತೆ ಉಡುಪಿ, ಬೀದರ್ ನಲ್ಲಿ ತಲಾ ಮೂರು ಪ್ರಕರಣಗಳು ದೃಢವಾಗಿದೆ. ಯಾದಗಿರಿ, ಚಿಕ್ಕಬಳ್ಳಾಪುರ, ಶಿವಮೊಗ್ಗದಲ್ಲಿ ತಲಾ ಎರಡು ಪ್ರಕರಣಗಳು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಸೋಂಕು ಪ್ರಕರಣ ದೃಢವಾಗಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆಯಾಗಿದೆ. ಇದರಲ್ಲಿ 41 ಜನರು ಸಾವನ್ನಪ್ಪಿದ್ದು, 597 ಜನರು ಗುಣಮುಖರಾಗಿದ್ದಾರೆ. ಓರ್ವ ಸೋಂಕಿತ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next