ಊಟಕ್ಕಿಲ್ಲದ ಉಪ್ಪಿನಕಾಯಿ
Advertisement
ಕಳೆದ 8-10 ವರ್ಷಗಳಿಂದ ಬಿ.ಎಸ್.ಎನ್.ಎಲ್. ಟವರ್ ಇಲ್ಲಿ ಸ್ಥಿರವಾಗಿ ನಿಂತಿದೆ. ಆದರೆ, ಜನರ ಪಾಲಿಗೆ ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಇಲ್ಲಿನ ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಕರೆಂಟ್ ಇದ್ದಾಗ ಮಾತ್ರ ಮೊಬೆ„ಲ್ ಸಂಪರ್ಕ ಸ್ವಲ್ಪವಾದರೂ ಸಿಗುತ್ತದೆ. ಕರೆಂಟ್ ಹೋದಾಗ ಮೊಬೈಲ್ ಸಂಪರ್ಕ ಕೂಡಾ ಕಟ್. ಮೊಬೆ„ಲ್ ಟವರ್ ನಿರ್ವಹಣಾ ಕೇಂದ್ರದಲ್ಲಿ ಜನರೇಟರ್ ಇದ್ದರೂ ಅದರ ಬಳಕೆಗೆ ಡೀಸೆಲ್ ಕೊರತೆ ಜನರನ್ನು ಇನ್ನಷ್ಟು ನಿರಾಸೆಗೊಳಿಸಿದೆ. ಒಂದೆಡೆ ತಾಂತ್ರಿಕ ದೋಷವಾದರೆ ಮತ್ತೂಂದೆಡೆ ಸೌಕರ್ಯಗಳ ಕೊರತೆಯಿಂದಾಗಿ ವ್ಯವಸ್ಥೆ ಕೈಕೊಡುತ್ತಿದೆ.
Related Articles
ಕುಕ್ಕಡ ಹಾಗೂ ಹೊಸೂರಿನಲ್ಲಿ ನೂತನ ಟವರ್ ನಿರ್ಮಿಸಲಾಗಿದ್ದರೂ ಸ್ಯಾಟ್ಲೈಟ್ ಸಂಪರ್ಕ ವ್ಯವಸ್ಥೆ ಸಮಸ್ಯೆಯಿಂದಾಗಿ ಇಲ್ಲಿ ಕೂಡ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಅಭಿವೃದ್ಧಿ ಪಥದಲ್ಲಿರುವ ಆಧುನಿಕ ವ್ಯವಸ್ಥೆಗಳಲ್ಲೊಂದಾದ ಮೊಬೈಲ್ ಟವರ್ ಗ್ರಾಮಗ್ರಾಮಗಳಲ್ಲಿ ತಲೆಎತ್ತಿಕೊಂಡಿದ್ದರೂ ಬಳಕೆದಾರರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ವಂಚಿತರಾಗುತ್ತಿರುವುದು ಇಲಾಖೆಯ ಸೇವೆಯ ವೈಫಲ್ಯವೇ ಅಥವಾ ಆಧುನಿಕ ಉಪಕರಣಗಳ ಬಳಕೆಗೆ ಎದುರಾದ ತಾಂತ್ರಿಕ ದೋಷವೇ ಅಥವ 4ಜಿ, 5ಜಿಗಳ ಧಾವಂತದ ನಡುವೆ ಎದುರಾಗುತ್ತಿರುವ ತಾಂತ್ರಿಕ ದೋಷಗಳನ್ನು ನಿಭಾಯಿಸುವಲ್ಲಿ ಇಲಾಖೆ ಎಡವುತ್ತಿದೆಯೇ ಎಂಬುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
Advertisement
ತಾಯಿ-ಮಕ್ಕಳ ಬಾಂಧವ್ಯಕ್ಕೂ ಅಡ್ಡಿಚಿತ್ತೂರು, ಇಡೂರು ಭಾಗದ ಹೆಚ್ಚಿನ ಯುವಕರು ಬೆಂಗಳೂರು ಇಲ್ಲವೇ ದುಬೈನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಮನೆಯವರ ಜತೆ ಮಾತನಾಡಲು ಅವಕಾಶ ಸಿಗುವುದು ರಾತ್ರಿಯ ಹೊತ್ತು ಮಾತ್ರ. ಆದರೆ, ಈ ಭಾಗದಲ್ಲಿ ರಾತ್ರಿ ವಿದ್ಯುತ್ನೊಂದಿಗೆ ಮೊಬೈಲ್ ಸಂಪರ್ಕ ಕೂಡಾ ಕೈಕೊಡುತ್ತದೆ. ಹೀಗಾಗಿ ಮಕ್ಕಳಿಗೆ ತಾಯಿ ಜತೆ ಮಾತನಾಡುವುದು ಕೂಡಾ ಕಷ್ಟ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜತೆಗೆ ಏನಾದರೂ ತುರ್ತು ಸಮಸ್ಯೆ ಎದುರಾದರೆ ಸಂಪರ್ಕ ಸಾಧಿಸಲು ಹರಸಾಹಸ ಪಡಬೇಕು. ಶಾಶ್ವತ ಪರಿಹಾರ ಲಭಿಸಿಲ್ಲ
ಚಿತ್ತೂರು ಹಾಗೂ ಇಡೂರಿನಲ್ಲಿ ಮೊಬೈಲ್ ಟವರ್ ಗಳಿವೆ. ಆದರೆ ನೆಟ್ವರ್ಕ್ ವಂಚಿತರಾದ ಈ ಭಾಗದ ನಿವಾಸಿಗಳ ನಿತ್ಯ ಗೋಳಿಗೆ ಇನ್ನೂ ಶಾಶ್ವತ ಪರಿಹಾರ ಲಭಿಸಿಲ್ಲ.
– ಸರ್ವೋತ್ತಮ ಶೆಟ್ಟಿ, ಇಡೂರು -ಡಾ| ಸುಧಾಕರ ನಂಬಿಯಾರ್