Advertisement

Chandra Kumar bose: ಈಡೇರದ ಭರವಸೆ…ಸುಭಾಶ್ಚಂದ್ರ ಬೋಸ್‌ ಸಂಬಂಧಿ ಬಿಜೆಪಿಗೆ ರಾಜೀನಾಮೆ

06:15 PM Sep 06, 2023 | Team Udayavani |

ನವದೆಹಲಿ: ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ಹಾಗೂ ಪಶ್ಚಿಮಬಂಗಾಳದ ನಾಯಕತ್ವದ ವಿಚಾರದಲ್ಲಿ ಭಾರತೀಯ ಜನತಾ ಪಕ್ಷ ಸಮರ್ಪಕ ಬೆಂಬಲ ನೀಡದ ಹಿನ್ನೆಲೆಯಲ್ಲಿ ನೇತಾಜಿ ಅವರ ಸೋದರ ಸಂಬಂಧಿ ಚಂದ್ರಕುಮಾರ್‌ ಬೋಸ್‌ ಅವರು ಬುಧವಾರ (ಸೆಪ್ಟೆಂಬರ್‌ 06) ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

Advertisement

ಇದನ್ನೂ ಓದಿ:Chennai; ತಲೆಮರೆಸಿಕೊಂಡಿದ್ದ ಐಸಿಸ್ ತ್ರಿಶೂರ್ ಮಾಡ್ಯೂಲ್‌ನ ನಾಯಕನ ಬಂಧಿಸಿದ NIA

ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರಿಗೆ ಚಂದ್ರ‌ ಬೋಸ್ ಬರೆದಿರುವ ಪತ್ರದಲ್ಲ, ನಾನು ಬಿಜೆಪಿ ಪಕ್ಷ ಸೇರ್ಪಡೆಗೊಂಡಾಗ, ನೇತಾಜಿ ಸುಭಾಶ್ಚಂದ್ರ ಬೋಸ್‌ ಮತ್ತು ಶರತ್‌ ಚಂದ್ರ ಬೋಸ್‌ ಅವರನ್ನೊಳಗೊಂಡ ಸಿದ್ಧಾಂತವನ್ನು ಪ್ರಚಾರ ಮಾಡಲು ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅದು ಈವರೆಗೂ ಈಡೇರಿಲ್ಲ.

ಅದೇ ರೀತಿ ಭಾರತೀಯ ಜನತಾ ಪಕ್ಷದ ಚೌಕಟ್ಟಿನಲ್ಲಿ ಆಜಾದ್‌ ಹಿಂದ್‌ ಮೋರ್ಚಾ ಸಂಘಟನೆ ಮಾಡಿ, ಧರ್ಮ, ಜಾತಿ, ಅಂತಸ್ತನ್ನು ಪರಿಗಣಿಸದೇ ಎಲ್ಲಾ ಭಾರತೀಯರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ನೇತಾಜಿಯವರ ಸಿದ್ಧಾಂತವನ್ನು ಪ್ರಚಾರ ಮಾಡುವುದು ಪ್ರಾಥಮಿಕ ಯೋಜನೆಯಲ್ಲಿ ಒಂದಾಗಿತ್ತು. ಆದರೆ ಇದ್ಯಾವುದಕ್ಕೂ ಭಾರತೀಯ ಜನತಾ ಪಕ್ಷದಿಂದ ಯಾವುದೇ ಬೆಂಬಲ ದೊರಕಿಲ್ಲ ಎಂದು ಚಂದ್ರ ಬೋಸ್‌ ಅಸಮಧಾನವ್ಯಕ್ತಪಡಿಸಿದ್ದಾರೆ.

ನನ್ನ ಎಲ್ಲಾ ಪ್ರಸ್ತಾಪವನ್ನು ಪಶ್ಚಿಮಬಂಗಾಳದ ಬಿಜೆಪಿ ಘಟಕವಾಗಲಿ ಅಥವಾ ಹೈಕಮಾಂಡ್‌ ಆಗಲಿ ನಿರ್ಲಕ್ಷಿಸಿ ಬಿಟ್ಟಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next