ಸ್ವಿಜರ್ ಲ್ಯಾಂಡ್: ಸಾರ್ವಕಾಲಿಕ ಶ್ರೇಷ್ಠ ಪುರುಷರ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್ ಗ್ರ್ಯಾಂಡ್ ಸ್ಲಾಮ್ ಮತ್ತು ಎಟಿಪಿ ಪಂದ್ಯಾವಳಿಗಳಿಂದ ನಿವೃತ್ತಿಯಾಗುವ ನಿರ್ಧಾರವನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಟೆನಿಸ್ ತ್ಯಜಿಸುವುದಾಗಿ ಫೆಡರರ್ ಗುರುವಾರ ಘೋಷಿಸಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ ಗಳ ಗೆದ್ದ ಫೆಡರರ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೆನಿಸಿ ಕೊಂಡವರು. ಮುಂದಿನ ವಾರ ಲಂಡನ್ ನಲ್ಲಿ ನಡೆಯಲಿರುವ ಲೇವರ್ ಕಪ್ ಫೆಡರರ್ ನ ಅಂತಿಮ ಎಟಿಪಿ ಸ್ಪರ್ಧೆಯಾಗಿದೆ.
ರೋಜರ್ ಫೆಡರರ್ ನಿವ್ವಳ ಮೌಲ್ಯ 550 ಯುಎಸ್ ಡಿ ಮಿಲಿಯನ್. ಟೆನಿಸ್ ಕೂಟಗಳಲ್ಲೇ 130 ಯುಎಸ್ ಡಿ ಮಿಲಿಯನ್ ಹಣವನ್ನು ಬಹುಮಾನ ರೂಪದಲ್ಲಿ ಪಡೆದಿದ್ದಾರೆ. 2020 ರಲ್ಲಿ, ಫೆಡರರ್ ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುವಿನ ಸ್ಥಾನಕ್ಕೆ ಏರಿದ್ದರು. 2022ರಲ್ಲಿ 7ನೇ ಸ್ಥಾನಕ್ಕೆ ಕುಸಿದರು. ಫೆಡರರ್ ಅನೇಕ ಪ್ರಸಿದ್ಧ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಪಡೆದುಕೊಂಡಿದ್ದಾರೆ. ಇದರಿಂದಲೂ ಅವರು ಸಂಪಾದನೆ ಮಾಡುತ್ತಾರೆ.
ಇದನ್ನೂ ಓದಿ:ತನ್ನ ಪತಿ ಮೊದಲು ‘ಮಹಿಳೆ’ಯಾಗಿದ್ದ ಎಂದು ಪತ್ನಿಗೆ ತಿಳಿದಿದ್ದು ಎಂಟು ವರ್ಷಗಳ ಬಳಿಕ!
ವಿವಿಧ ಮಾಧ್ಯಮ ವರದಿಗಳ ಪ್ರಕಾರ ರೋಜರ್ ಫೆಡರರ್ ಅವರು, 70 ಯುಎಸ್ ಡಿ ಮಿಲಿಯನ್ ವೇತನವನ್ನು ಹೊಂದಿದ್ದಾರೆ. ಸುಮಾರು 90 ಯುಎಸ್ ಡಿ ಮಿಲಿಯನ್ ಹಣವನ್ನು ಅವರು ವಿವಿಧ ಪ್ರಾಯೋಜಕತ್ವಗಳಿಂದ ಗಳಿಸಿದ್ದಾರೆ.
ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್, ಮರ್ಸಿಡಿಸ್-ಬೆನ್ಜ್, ನೆಟ್‌ಜೆಟ್ಸ್, ರಿಮೋವಾ, ರೋಲೆಕ್ಸ್, ಸನ್‌ರೈಸ್ ಕಮ್ಯುನಿಕೇಷನ್ಸ್ ಎಜಿ, ಸ್ವಿಟ್ಜರ್ಲೆಂಡ್ ಪ್ರವಾಸೋದ್ಯಮಗಳು ರೋಜರ್ ಫೆಡರರ್ ಅವರಿಗೆ ಪ್ರಾಯೋಜತ್ವ ನೀಡುತ್ತದೆ.