ನವಿಮುಂಬಯಿ: ಕಲಿಯುಗದಲ್ಲಿ ಅತ್ಯಂತ ಕಾರಣಿಕದ ದೇವರಲ್ಲಿ ಶನಿದೇವರು ಒಬ್ಬರು. ಭಕ್ತರನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೇವರೆಂದರೆ ಶನಿದೇವರು. ಶನಿದೇವರು ಎಂದರೆ ಕಷ್ಟ ನೀಡುವ ದೇವರು ಎಂಬ ತಪ್ಪು ಕಲ್ಪನೆಯಿದೆ. ಭಕ್ತಿ-ಶ್ರದ್ಧೆಯಿಂದ ಶನಿದೇವರನ್ನು ಆರಾಧಿಸಿದರೆ ನಮ್ಮ ಜೀವನದ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರು ನುಡಿದರು.
ಫೆ. 5ರಂದು ನೆರೂಲ್ ಶ್ರೀ ಶನೀಶ್ವರ ಮಂದಿರದಲ್ಲಿ ರಥೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸ್ಥಳೀಯ ಶಾಸಕಿ ಮಂದಾತಾಯಿ ಮ್ಹಾತ್ರೆ ಮಾತನಾಡಿ, ನೆರೂಲ್ ಶ್ರೀ ಶನೀಶ್ವರ ಮಂದಿರದ ಆಡಳಿತ ಸಮಿತಿಯು ಅತ್ಯುತ್ತಮ ರೀತಿಯಲ್ಲಿ ದೇವಸ್ಥಾನವನ್ನು ಮುನ್ನಡೆಸುತ್ತಿದೆ ಎಂದರು.
ಇನ್ನೋರ್ವ ಗೌರವ ಅತಿಥಿ ನವಿಮುಂಬಯಿ ನಗರಪಾಲಿಕೆಯ ಉಪ ಮೇಯರ್ ಅವಿನಾಶ್ ಲಾಡ್ ಅವರು ಮಾತನಾಡಿ, ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ ನೆರೂಲ್ ಶ್ರೀ ಶನೀಶ್ವರ ಮಂದಿರದ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ತಮ ಸಾಮಾಜಿಕ ಕಾರ್ಯಕ್ರಮಗಳು ಜರಗುತ್ತಿರುವುದು ಅಭಿ ನಂದನೀಯವಾಗಿದೆ ಎಂದರು.
ದೇವಸ್ಥಾನದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಮಾತನಾಡಿ, ದೇವಸ್ಥಾನದ ಕಾರ್ಯಚಟುವಟಿಕೆ ಹಾಗೂ ಮಂದಿರವು ನಡೆದು ಬಂದ ಬಗೆ, ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ನವಿ ನವಿ ಮುಂಬಯಿಯ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಕಿರಣ್ ಪಾಟೀಲ್, ಸ್ಥಳೀಯ ನಗರ ಸೇವಕಿ ಮೀರಾ ಸಂಜಯ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ವೇದಿಕೆಯಲ್ಲಿ ಸಮಿತಿಯ ಪದಾಧಿ ಕಾರಿಗಳಾದ ಕಾರ್ಯ ದರ್ಶಿ ವಿ. ಕೆ. ಸುವರ್ಣ, ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಉಪಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಜತೆ ಕೋಶಾಧಿಕಾರಿ ಕರುಣಾಕರ ಆಳ್ವ, ಸದಸ್ಯರುಗಳಾದ ಜಯಕರ ಬಿ. ಪೂಜಾರಿ, ಎನ್. ಡಿ. ಶೆಣೈ, ಪುನೀತ್ ಕುಮಾರ್ ಶೆಟ್ಟಿ, ಪ್ರಭಾಕರ ಹೆಗ್ಡೆ, ದಯಾನಂದ ಎಸ್. ಶೆಟ್ಟಿ, ದಾಮೋದರ ಶೆಟ್ಟಿ, ಅನಿಲ್ ಹೆಗ್ಡೆ, ಕೃಷ್ಣ ಪೂಜಾರಿ, ತಾರನಾಥ್ ಶೆಟ್ಟಿ, ಎನ್. ಕೆ. ಪೂಜಾರಿ, ತಾರಾ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಅತಿಥಿಗಳನ್ನು ಸಂಸ್ಥೆಯ ಪದಾಧಿಕಾರಿಗಳು ಗೌರವಿಸಿದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುಪ್ರಿಯಾ ಹೆಗ್ಡೆ ವಂದಿಸಿದರು.
ನವಿಮುಂಬಯಿ ಪ್ರದೇಶದಲ್ಲಿ ನೆರೂಲ್ ಶ್ರೀ ಶನೀಶ್ವರ ಮಂದಿರವು ಒಂದು ಪ್ರಸಿದ್ಧಿ ಪಡೆದ ದೇವಸ್ಥಾನವಾಗಿದ್ದು, ಪ್ರತಿ ಶನಿವಾರ ಸಾವಿರಾರು ಜನರು ಶ್ರೀದೇವರ ದರ್ಶನ ವನ್ನು ಪಡೆದು ಧನ್ಯರಾಗುತ್ತಿದ್ದಾರೆ. ಮಂದಿರವು ಭಕ್ತಾದಿಗಳ ಇಷ್ಟಾರ್ಥವನ್ನು ಪೂರೈಸುವ ಶ್ರೀಕ್ಷೇತ್ರವಾಗಿಯೂ ಕಂಗೊಳಿಸುತ್ತಿರುವುದು ಹೆಮ್ಮೆಯ ವಿಷಯ ವಾಗಿದೆ. ಮಂದಿರದ ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಇನ್ನಿತರ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರು, ಭಕ್ತಾದಿಗಳ ಪ್ರೋತ್ಸಾಹ, ಸಹಕಾರ ಸದಾ ಇರಲಿ – ಸಂತೋಷ್ ಡಿ. ಶೆಟ್ಟಿ(ಕಾರ್ಯಾಧ್ಯಕ್ಷರು: ಶನೀಶ್ವರ ಸೇವಾ ಸಮಿತಿ ನೆರೂಲ್).