Advertisement

Nepal: ಹೊಸ ಪ್ರಧಾನಿಯಾಗಿ ಓಲಿ ಜು.15ರಂದು ಪ್ರಮಾಣ ಸ್ವೀಕಾರ

08:18 PM Jul 13, 2024 | Team Udayavani |

ಕಠ್ಮಂಡು: ನೇಪಾಳದ ಪ್ರಚಂಡ ನೇತೃತ್ವದ ಸರ್ಕಾರ ಪತನಗೊಂಡ ಬೆನ್ನಲ್ಲೇ ಸಿಪಿಎನ್‌-ಯುಎಂಎಲ್‌ ನಾಯಕ ಕೆ.ಪಿ.ಶರ್ಮಾ ಓಲಿ ಅವರು ಸರ್ಕಾರ ರಚನೆ ಪ್ರಕ್ರಿಯೆ ಆರಂಭಿಸಿದ್ದು, ಸೋಮವಾರವೇ (ಜು.15) ಅವರು ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕ ರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಓಲಿ ಅವರು ಮಿತ್ರಪಕ್ಷ ನೇಪಾಳಿ ಕಾಂಗ್ರೆಸ್‌ನೊಂದಿಗೆ ಸೇರಿ ಸರ್ಕಾರ ರಚಿಸಲಿದ್ದು, ಶನಿವಾರ ಹೊಸ ಸಚಿವರ ಪಟ್ಟಿಯನ್ನು ತಯಾರಿಸಿದ್ದಾರೆ. ಭಾನುವಾರ ಮಧ್ಯಾಹ್ನ ಅಧ್ಯಕ್ಷ ರಾಮ್‌ ಚಂದ್ರ ಪೌಡೆಲ್‌ ಅವರು ಎನ್‌ಸಿ-ಯುಎಂಎಲ್‌ ಮೈತ್ರಿಕೂಟದ ಪ್ರಧಾನಿಯಾಗಿ ಓಲಿ ಅವರನ್ನು ನೇಮಕ ಮಾಡುವ ನಿರೀಕ್ಷೆಯಿದೆ. ಸೋಮವಾರ ಬೆಳಗ್ಗೆ ಓಲಿ ಮತ್ತು ಸಚಿವ ಸಂಪುಟದ ಪ್ರಮಾಣ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಶುಕ್ರವಾರವಷ್ಟೇ ಸಂಸತ್‌ನಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫ‌ಲವಾದ ಕಾರಣ ಮಾಜಿ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ ನೇತೃತ್ವದ ಸರ್ಕಾರ ಪತನಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next