Advertisement

Helicopter Crashes: ನೇಪಾಳದಲ್ಲಿ ಹೆಲಿಕಾಪ್ಟರ್ ಪತನ, ಪೈಲೆಟ್ ಸೇರಿ ಐವರು ದುರ್ಮರಣ

04:55 PM Aug 07, 2024 | Team Udayavani |

 ಕಠ್ಮಂಡು: ನೇಪಾಳದ ಕಠ್ಮಂಡುವಿನ ವಾಯುವ್ಯ ಪರ್ವತ ಪ್ರದೇಶದಲ್ಲಿ ಬುಧವಾರ ಹೆಲಿಕಾಪ್ಟರ್ ಪತನಗೊಂಡು ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

Advertisement

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ‘ಏರ್ ಡೈನಾಸ್ಟಿ ಹೆಲಿಕಾಪ್ಟರ್, 9N-AZD’ ಕಠ್ಮಂಡುವಿನಿಂದ ರಾಸುವಾಗೆ ತೆರಳುತ್ತಿತ್ತು ಮಧ್ಯಾಹ್ನ 1:54 ರ ಹೊತ್ತಿಗೆ ಟೇಕ್ ಆಫ್ ಆದ ಮೂರೇ ನಿಮಿಷಕ್ಕೆ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡು ನುವಾಕೋಟ್ ಜಿಲ್ಲೆಯ ಸೂರ್ಯ ಚೌರ್ -7 ರಲ್ಲಿ ಗುಡ್ಡ ಪ್ರದೇಶಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ ಎನ್ನಲಾಗಿದೆ.

ಅಪಘಾತದ ಸ್ಥಳದಿಂದ ನಾಲ್ವರು ಚೀನಾ ಪ್ರಜೆಗಳು ಹಾಗೂ ಪೈಲೆಟ್ ಸೇರಿದಂತೆ ಒಟ್ಟು ಐವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: RenukaSwamy Case: ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ; ಕೇಸ್‌ಗೆ ಟ್ವಿಸ್ಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next