Advertisement

Atlee Kumar:‌ ಒಂದೇ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌, ಕಮಲ್‌ ಹಾಸನ್;‌ ಅಟ್ಲಿ ಆ್ಯಕ್ಷನ್ ಕಟ್

02:56 PM Sep 03, 2024 | |

ಮುಂಬಯಿ: ಕಿಂಗ್‌ ಖಾನ್‌ ಶಾರುಖ್‌ (ShahRukh Khan) ಅವರೊಂದಿಗೆ ‘ಜವಾನ್‌ʼ ಸಿನಿಮಾ ಮಾಡಿ ಬಾಲಿವುಡ್‌ನಲ್ಲೂ ಮಿಂಚಿದ್ದ ಸೌತ್‌ ಸೂಪರ್‌ ಹಿಟ್‌ ನಿರ್ದೇಶಕ ಅಟ್ಲಿ ಕುಮಾರ್(Atlee Kumar) ಮತ್ತೊಬ್ಬ ಬಾಲಿವುಡ್‌ ಸೂಪರ್‌ ಸ್ಟಾರ್‌ ನಟನೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ.

Advertisement

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್‌ ಇದುವರೆಗೆ ಸೋಲು ಕಂಡಿರದ ನಿರ್ದೇಶಕರಲ್ಲಿ ಒಬ್ಬರು. ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಬಂದಿದ್ದ ʼಜವಾನ್‌ʼ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು.

ʼಜವಾನ್‌ʼ ಸಕ್ಸಸ್‌ ಬಳಿಕ ಅವರು ಮತ್ತೆ ಶಾರುಖ್‌ ಖಾನ್‌ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದರು. ಇದಲ್ಲದೆ ಸಲ್ಮಾನ್‌ , ಆಮೀರ್‌ ಅವರೊಂದಿಗೆ ತನಗೆ ಕೆಲಸ ಮಾಡುವ ಇರಾದೆ ಇದೆಯೆಂದು ವೇದಿಕೆಯೊಂದರಲ್ಲಿ ಅಟ್ಲಿ ಹೇಳಿದ್ದರು.

ಅದರಂತೆ ಅವರು ಸಲ್ಮಾನ್‌ ಖಾನ್‌(Salman Khan) ಅವರೊಂದಿಗೆ ಸಿನಿಮಾ ಮಾಡುವ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ವರದಿಯಾಗಿದೆ.

Advertisement

ಈ ಸಿನಿಮಾದ ವಿಶೇಷವೆಂದರೆ ಕಾಲಿವುಡ್‌ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ (Kamal Hasan) ಕೂಡ ಸಿನಿಮಾದ ಭಾಗವಾಗಲಿದ್ದು, ಒಂದೇ ಸ್ಕ್ರೀನ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಸ್ಟಾರ್‌ಗಳು ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಟೈಟಲ್‌ ಅಂತಿಮವಾಗದ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕೆಲಸ ಇದೇ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿದ್ದು, ಈ ತಿಂಗಳ ಕೊನೆಯಲ್ಲಿ ಸಲ್ಮಾನ್ ಮತ್ತು ಕಮಲ್ ಸಿನಿಮಾದ ಸಂಪೂರ್ಣ ಸ್ಕ್ರಿಪ್ಟ್‌ ಆಲಿಸಿದ ಬಳಿಕ ಮುಂದಿನ ಅಟ್ಲಿ ಮುಂದಿನ ಹೆಜ್ಜೆಯನ್ನಿಡಲಿದ್ದಾರೆ ಎಂದು ವರದಿಯಾಗಿದೆ.

ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ಸೀನ್ಸ್‌ ಗಳಿರಲಿದ್ದು, ದೊಡ್ಡ ಪಾತ್ರವರ್ಗಗಳು ಇರಲಿವೆ ಎನ್ನಲಾಗಿದೆ. 2025ರ ಆರಂಭದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಸದ್ಯ ಸಲ್ಮಾನ್‌ ಖಾನ್‌ ಎಆರ್ ಮುರುಗದಾಸ್ ಅವರ ʼಸಿಕಂದರ್‌ʼ ಸಿನಿಮಾದಲ್ಲಿ ನಿರತರಾಗಿದ್ದು, ಇತ್ತ ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಸೋಲಿನ ಬಳಿಕ ʼಥಗ್‌ ಲೈಫ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.