Advertisement

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼ ಓಟಿಟಿ ರೈಟ್ಸ್‌ ದಾಖಲೆ ಬೆಲೆಗೆ ಸೇಲ್?

05:33 PM Sep 01, 2024 | Team Udayavani |

ಹೈದರಾಬಾದ್: ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಅಲ್ಲು ಅರ್ಜುನ್‌(Allu Arjun‌) ಅವರ ʼಪುಷ್ಪ-2ʼ (Pushpa 2: The Rule ) ರಿಲೀಸ್‌ ವಿಚಾರವಾಗಿ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಸಿನಿಮಾ ರಿಲೀಸ್‌ ಆಗಿ ಓಟಿಟಿಗೂ ದಾಪುಗಾಲಿಡುವ ಸಮೀಪಕ್ಕೆ ಬರುತ್ತಿತ್ತು.

Advertisement

ಆದರೆ ಟೀಸರ್‌ ಮತ್ತು ಹಾಡುಗಳನ್ನು ರಿಲೀಸ್‌ ಮಾಡಿ,  ಬಿಡುಗಡೆ ದಿನಾಂಕ ಮುಂದೂಡಿದ ಬಳಿಕ ಚಿತ್ರದ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಚಿತ್ರ ಆಗಸ್ಟ್ 15 ರಂದು ರಿಲೀಸ್‌ ಆಗಲಿದೆ ಎಂದು ಬಹಳ ಹಿಂದೆಯೇ ಅನೌನ್ಸ್‌ ಮಾಡಿದ್ದ ಚಿತ್ರತಂಡ ರಿಲೀಸ್‌ ಡೇಟ್‌ ಮುಂದೂಡಿದೆ. ಡಿಸೆಂಬರ್ 6ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಆದರೆ ಅಲ್ಲು ಅರ್ಜುನ್‌ ಹಾಗೂ ಸುಕುಮಾರ್  ಮಧ್ಯೆ ಹೊಂದಾಣಿಕೆ ಕೊರತೆಯ ಕಾರಣದಿಂದ ಆ ದಿನ ಕೂಡ ಸಿನಿಮಾ ರಿಲೀಸ್‌ ಡೌಟ್ ಎನ್ನಲಾಗುತ್ತಿತ್ತು.

ಆದರೆ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದು, ಇದೇ ವರ್ಷ ಸಿನಿಮಾ ರಿಲೀಸ್‌ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಈ ನಡುವೆ ʼಪುಷ್ಪ-2ʼ ಓಟಿಟಿ ರೈಟ್ಸ್‌ ಬೃಹತ್‌ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ.

Advertisement

ʼಪುಷ್ಪ-2ʼ ಸಿನಿಮಾದ ಓಟಿಟಿ ಡೀಲ್ (OTT Rights) 270 ಕೋಟಿ ರೂಪಾಯಿಗಳಿಗೆ ನೆಟ್‌ ಫ್ಲಿಕ್ಸ್ ಖರೀದಿಸಿದೆ ಎಂದು‌ ‘ಆಕಾಶವಾಣಿ’ ವರದಿ ಮಾಡಿದೆ.

ಚಿತ್ರದ ಮೊದಲ ಭಾಗದ ಓಟಿಟಿ ರೈಟ್ಸ್‌ ನ್ನು ಅಮೆಜಾನ್ ಪ್ರೈಮ್ ವಿಡಿಯೋ  ಖರೀದಿಸಿತ್ತು. ಎರಡನೇ ಭಾಗದ ಓಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಚಿತ್ರದ ನಂತರದ ಥಿಯೇಟ್ರಿಕಲ್ ಹಕ್ಕುಗಳನ್ನು ಪಡೆದುಕೊಳ್ಳಲು 270 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು, ಇದುವರೆಗೆ ಯಾವುದೇ ಭಾರತೀಯ ಚಿತ್ರಕ್ಕೆ ನೀಡಲಾದ ದೊಡ್ಡ ಮೊತ್ತ ಇದಾಗಿದೆ ಎಂದು ವರದಿಯಾಗಿದೆ.

ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಮುಂದೆ ಫಾಹದ್‌ ಫಾಸಿಲ್‌ ಅಬ್ಬರಿಸಲಿದ್ದಾರೆ. ಇನ್ನುಳಿದಂತೆ ರಶ್ಮಿಕಾ ಮಂದಣ್ಣ, ಧನಂಜಯ, ಜಗದೀಶ್ ಪ್ರತಾಪ್ ಬಂಡಾರಿ, ರಾವ್ ರಮೇಶ್, ಅಜಯ್, ಸುನಿಲ್, ಅನಸೂಯಾ ಭಾರದ್ವಾಜ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.