Advertisement

ಪಟ್ಟಿಯಲ್ಲಿ ಹೆಸರಿಲ್ಲದವರು ನೇಕಾರ ಸಮ್ಮಾನಗೆ ಅರ್ಹ

07:12 AM Jun 14, 2020 | Suhan S |

ದೋಟಿಹಾಳ: ಕೋವಿಡ್‌-19 ಸಾಂಕ್ರಾಮಿಕ ರೋಗದ ಸಮಸ್ಯೆಯಿಂದಾಗಿ ಕೈಮಗ್ಗ ನೇಕಾರರು ಸಂಕಷ್ಟದಲ್ಲಿರುವುದರಿಂದ ನೇಕಾರರ ಸಮ್ಮಾನ ಯೋಜನೆ ಜಾರಿಗೊಳಿಸುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Advertisement

ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ನೇಕಾರರಿದ್ದಾರೆ. ಆದರೆ 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯ ಸಮೀಕ್ಷೆ ವೇಳೆ ಗ್ರಾಮದ ಅನೇಕ ನೇಕಾರರ ಹೆಸರು ಸೇರ್ಪಡೆಗೊಂಡಿಲ್ಲ. ಗ್ರಾಮದ ಕೈಮಗ್ಗ ನೇಕಾರ ಸಂಘದ ಸುಮಾರು 457 ಸದಸ್ಯರಲ್ಲಿ ಕೇವಲ 150 ಸದಸ್ಯರಿಗೆ ಮಾತ್ರ ಇದರ ಸೌಲಭ್ಯ ಸಿಗುತ್ತದೆ, ಉಳಿದ 300ಕ್ಕೂ ಹೆಚ್ಚು ನೇಕಾರರ ಕುಟುಂಬಗಳಿಗೆ ಇದರಿಂದ ವಂಚಿತರಾಗುತ್ತಿದ್ದಾರೆ ಎಂದು ನೇಕಾರರು ಆರೋಪ ಮಾಡಿದರು.

ಜಿಲ್ಲೆಯ ಅನೇಕ ನೇಕಾರರು ಈ ಯೋಜನೆಯಿಂದ ವಂಚಿತರಾಗುತ್ತಾರೆ ಎಂದು “ಉದಯವಾಣಿ’ ಪತ್ರಿಕೆಯಲ್ಲಿ “ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಮ್ಮಾನ’ ಎಂಬ ಶೀಷಿರ್ಕೆಯಲ್ಲಿ ಶನಿವಾರ (ಜೂ: 13ರಂದು) ವರದಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಜವಳಿ ಇಲಾಖೆಯ ಉಪನಿರ್ದೇಶಕ ಬೆಣಕಲ್‌ ಅವರು ದೂರವಾಣಿ ಮುಖಾಂತರ ಸಂಪರ್ಕಿಸಿ ಜಿಲ್ಲೆಯಲ್ಲಿ ಯಾರಾದರೂ 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯ ಸಮೀಕ್ಷೆಯ ಪಟ್ಟಿಯಿಂದ ವಂಚಿತರಾದ ಸದ್ಯ ನೇಕಾರಿಕ ವೃತ್ತಿಯಲ್ಲಿ ಮತ್ತು ನೇಕಾರಿ ಚಟುವಟಿಕೆ ತೊಡಗಿದವರು ಇದರೆ. ಅಂತಹವರು ಖುದ್ದಾಗಿ ಅಥವಾ ಅಂಚೆ ಮುಖಾಂತರ ಜಿಲ್ಲಾ ಜವಳಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿಗಳನ್ನು ಇಲಾಖೆ ಅಧಿಕಾರಿ ಸ್ಥಳ ಪರಿಶೀಲನೆ ಮಾಡಿ ಅವರಿಗೂ ನೆರವು ನೀಡಲಾಗುತ್ತದೆ ಅವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next