Advertisement

ಕಿವೀಸ್ ಟೆಸ್ಟ್ ತಂಡ ಸೇರಿದ ವೇಗಿ ಮ್ಯಾಟ್ ಹೆನ್ರಿ: ನೀಲ್ ವ್ಯಾಗ್ನರ್ ಹೊರ ನಡೆಯುವ ಸಾಧ್ಯತೆ

12:49 PM Feb 20, 2020 | keerthan |

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ದಿನವೊಂದು ಬಾಕಿ ಇರುವಾಗಲೇ ಕಿವೀಸ್ ವೇಗಿ ಮ್ಯಾಟ್ ಹೆನ್ರಿಯನ್ನು ತಂಡಕ್ಕೆ ಕರೆಸಿಕೊಂಡಿದೆ. ನೀಲ್ ವ್ಯಾಗ್ನರ್ ತಂಡದಿಂದ ಹೊರಹೋಗುವ ಸಾಧ್ಯತೆಯಿರುವ ಕಾರಣ ಈ ಕರೆ ನೀಡಲಾಗಿದೆ.

Advertisement

ಕಿವೀಸ್ ಟೆಸ್ಟ್ ತಂಡದ ಪ್ರಮುಖ ವೇಗಿಯಾಗಿರುವ ನೀಲ್ ವ್ಯಾಗ್ನರ್ ಮೊದಲ ಮಗುವಿನ ನಿರೀಕ್ಷಯಲ್ಲಿದ್ದಾರೆ. ಹೀಗಾಗಿ ವ್ಯಾಗ್ನರ್ ತಂಡದ ಸೇವೆಗೆ ಲಭ್ಯವಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಅವರ ಜಾಗವನ್ನು ತುಂಬಲು ಮ್ಯಾಟ್ ಹೆನ್ರಿಯವರನ್ನು ಕರೆಸಲಾಗಿದೆ.

ಈಗಾಗಲೇ 12 ಟೆಸ್ಟ್ ಪಂದ್ಯವಾಡಿರುವ ಹೆನ್ರಿಯವರನ್ನು ಆಡುವ 13 ಜನರ ಸ್ಕ್ವಾಡ್ ನಲ್ಲಿ ಸೇರಿಸಲಾಗಿಲ್ಲ. ಯುವ ವೇಗಿ ಕೈಲ್ ಜ್ಯಾಮಿಸನ್ ಅವರನ್ನು ಈ ಸ್ಕ್ವಾಡ್ ನಲ್ಲಿ ಸೇರಿಸಲಾಗಿದ್ದು, ಒಂದು ವೇಳೆ ವ್ಯಾಗ್ನರ್ ಮೊದಲ ಪಂದ್ಯ ತಪ್ಪಿಸಿಕೊಂಡರೇ ಜ್ಯಾಮಿಸನ್ ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ.

ಹೆನ್ರಿ ಕಡೆಯದಾಗಿ ಈ ವರ್ಷದ ಆರಂಭದ ಆಸೀಸ್ ವಿರುದ್ಧದ ಟೆಸ್ಟ್ ನಲ್ಲಿ ಆಡಿದ್ದರು. ಆದರೆ ಕೇವಲ ಎರಡು ವಿಕೆಟ್ ಕಬಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next