Advertisement

ನೆಹರೂನಗರ: ಸುದಾನ ಶಾಲೆಯಲ್ಲಿ  ನ್ಯೂಟ್ರಿಶನ್‌ ಡೇ

05:45 AM Jul 21, 2017 | Team Udayavani |

ನಗರ: ವಿದ್ಯಾರ್ಥಿಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೆಹರೂನಗರ ಸುದಾನ ಶಾಲೆಯಲ್ಲಿ ಯುಕೆಜಿ ಮಕ್ಕಳಿಗಾಗಿ ನ್ಯೂಟ್ರಿಶನ್‌ ಡೇ ಆಯೋಜಿಸಲಾಗಿತ್ತು.

Advertisement

ವಿದ್ಯಾರ್ಥಿಗಳು ತಾವೇ ತಂದ ಹೆಸರು ಕಾಳು, ಸಿಹಿಜೋಳ, ದಾಳಿಂಬೆ ಮುಂತಾದ ಪೌಷ್ಟಿಕಾಂಶಭರಿತ ಆಹಾರ ವಸ್ತುಗಳನ್ನು ಮಿಶ್ರಣಗೊಳಿಸಿ ತಯಾರಿಸಿದ ಸಲಾಡ್‌ ಖಾದ್ಯವನ್ನು ಸೇವಿಸಿದರು. ಪೌಷ್ಟಿಕಾಂಶಯುಕ್ತ ಆಹಾರವನ್ನು ಪರಿಚಯಿಸುವ ಉದ್ದೇಶದಿಂದ ಹಮ್ಮಿ ಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಐರಿಸ್‌, ಸತ್ಯಪೂರ್ಣ ಮತ್ತು ಲಿಲ್ಲಿ ನೇತೃತ್ವ ವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್‌ ಮಕ್ಕಳು ಜಂಕ್‌ಪುಡ್‌ ಇಷ್ಟಪಡದೆ ಧವಸ ದಾನ್ಯ ಹಣ್ಣುಗಳಿಂದ ತಯಾರಿಸುವ ಆಹಾರವನ್ನು ಮಾತ್ರ ಬಳಸಿ ಬಾಲ್ಯದಿಂದಲೆ ಹೇಗೆ ಸುಂದರ ಹಾಗೂ ಆರೋಗ್ಯ ಪೂರ್ಣವಾಗಿ ಬದುಕಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ರಂಜಿತ್‌ ಮಥಾಯಿಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next