Advertisement

ಅಯೋಧ್ಯೆಯಲ್ಲಿ ಸಂಧಾನ

06:55 AM Nov 14, 2017 | Team Udayavani |

ಹೊಸದಿಲ್ಲಿ: ರಾಮ ಮಂದಿರ ವಿವಾದದ ಬಗ್ಗೆ ಡಿ.5ರಿಂದ ಅಂತಿಮ ವಿಚಾರಣೆ ಆರಂಭಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿರುವಂತೆಯೇ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥ ಪ್ರಯತ್ನಗಳು ನಡೆದಿವೆ. ಅದಕ್ಕೆ ನೇತೃತ್ವ ವಹಿಸಿರುವುದು ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ. ಸ್ವಯಂಪ್ರೇರಿತನಾಗಿಯೇ ಈ ಬಗ್ಗೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದೇನೆ. ನ.16ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಅವರು ಸೋಮವಾರ ತಿಳಿಸಿದ್ದಾರೆ. ರವಿಶಂಕರ್‌ ಅವರನ್ನು ಕೇಂದ್ರದ ಏಜೆಂಟ್‌ ಎಂದು ಕಾಂಗ್ರೆಸ್‌ ಟೀಕಿಸಿದ್ದಕ್ಕೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಅಯೋಧ್ಯೆಗೆ ಭೇಟಿ ನೀಡಿ ವಿವಾದಕ್ಕೆ ಸಂಬಂಧಪಟ್ಟವರನ್ನೆಲ್ಲ ಭೇಟಿಯಾಗಿ ಅವರೆಲ್ಲರ ಅಭಿಪ್ರಾಯಗಳನ್ನು ಆಲಿಸುವುದಾಗಿ ಹೇಳಿದ್ದಾರೆ. ಜತೆಗೆ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನೂ ಬೇಟಿಯಾಗುವುದಾಗಿಯೂ ತಿಳಿಸಿದ್ದಾರೆ. 

Advertisement

ಒವೈಸಿ ಟೀಕೆ: ರವಿಶಂಕರ ಗುರೂಜಿ ಪ್ರಯತ್ನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ  ಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಈ ವಿಚಾರ ದಲ್ಲಿ ಅವರಿಗೆ ಯಾವುದೇ ಅಧಿಕಾರವಿಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇಂಥ ಆಫ‌ರ್‌ ಅನ್ನು ತಿರಸ್ಕರಿಸಿದೆ. ರವಿಶಂಕರ್‌ ಈ ರೀತಿಯಾಗಿ ಗಾಳಿಪಟ ಹಾರಿಸುವ ವಿಚಾರ ಬಿಟ್ಟುಬಿಡಬೇಕು ಎಂದು ಹೇಳಿದ್ದಾರೆ.

ವಿರೋಧ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಅಯೋಧ್ಯೆ ವಿವಾದದ ಬಗ್ಗೆ ಉ.ಪ್ರ. ಶಿಯಾ ವಕ್ಫ್ ಮಂಡಳಿ ಸಿದ್ಧಪಡಿಸಿರುವ ಒಪ್ಪಂದ ಸೂತ್ರಕ್ಕೆ ಅಖೀಲ ಭಾರತೀಯ ಅಖಾಡಾ ಪರಿಷತ್‌ ವಿರೋಧ ವ್ಯಕ್ತಪಡಿಸಿದೆ. ಅದನ್ನು ಮಂಡಳಿ ಡಿ.5ರ ಒಳಗಾಗಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡುವ ಇರಾದೆ ಹೊಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next