Advertisement

NEET-UG Result; 6 ಟಾಪರ್‌ಗಳಿದ್ದ ಹರಿಯಾಣದಲ್ಲಿ ಈಗ ಒಬ್ಬರಿಗೂ ಪೂರ್ಣಾಂಕ ಇಲ್ಲ!

12:42 AM Jul 21, 2024 | Team Udayavani |

ಹೊಸದಿಲ್ಲಿ: ನೀಟ್‌-ಯುಜಿ ಪರೀಕ್ಷೆಗಳ ಕೇಂದ್ರ ಹಾಗೂ ನಗರವಾರು ಫ‌ಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶನಿವಾರ ಬಿಡುಗಡೆಗೊಳಿಸಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಈ ಫ‌ಲಿತಾಂಶ ಪ್ರಕಟವಾಗಿದೆ.

Advertisement

ವಿಶೇಷವೆಂದರೆ ಮೊದಲು ನಡೆದಿದ್ದ ಪರೀಕ್ಷೆಯಲ್ಲಿ ಹರಿಯಾಣದಲ್ಲಿ ಪರೀಕ್ಷೆ ಬರೆದಿದ್ದ 6 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದರು. ಆದರೆ ಶನಿವಾರ ಪ್ರಕಟವಾದ ಫ‌ಲಿತಾಂಶದ ಪ್ರಕಾರ ಇವರಲ್ಲಿ ಒಬ್ಬರಿಗೂ ಪೂರ್ಣಾಂಕ ಬಂದಿಲ್ಲ. ಈ ಕೇಂದ್ರದ ಒಬ್ಬ ವಿದ್ಯಾರ್ಥಿ ಮಾತ್ರ 680 ಅಂಕ ಪಡೆದಿದ್ದಾರೆ. 600ರ ಗಡಿ ದಾಟಿದವರು 13 ಮಂದಿ ಮಾತ್ರ. ಇದೇ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಎದುರಿಸುತ್ತಿರುವ ಬಿಹಾರ ಮತ್ತು ಗುಜರಾತ್‌ನ ಕೇಂದ್ರಗಳಲ್ಲಿ ಒಬ್ಬನೇ ಒಬ್ಬ ಅಭ್ಯರ್ಥಿಯ ಅಂಕವೂ 700 ದಾಟಿಲ್ಲ.

ಮರು ಪರೀಕ್ಷೆಯ ಫ‌ಲಿತಾಂಶ ಮತ್ತು ಮೊದಲ ಬಾರಿಗೆ ನಡೆಸಿದ್ದ ಪರೀಕ್ಷೆಯ ಫ‌ಲಿತಾಂಶಗಳನ್ನು ಒಟ್ಟುಗೂಡಿಸಿ, ಪರಿಷ್ಕೃತ ಫ‌ಲಿತಾಂಶ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್‌ ಎನ್‌ಟಿಎಗೆ ಸೂಚನೆ ನೀಡಿತ್ತು.
ಅಲ್ಲದೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಬೇರೆ ಕೇಂದ್ರಗಳಲ್ಲಿ ಬರೆದವರಿಗಿಂತ ಹೆಚ್ಚಿನ ಅಂಕ ಗಳಿಸಿದ್ದಾರೆಯೇ ಎಂದು ಖಾತರಿ ಪಡಿಸಿಕೊಳ್ಳಲು ನಗರವಾರು ಮತ್ತು ಕೇಂದ್ರವಾರು ಫ‌ಲಿತಾಂಶವನ್ನು ವಿದ್ಯಾರ್ಥಿಗಳ ಗುರುತು ಮರೆಮಾಚಿ ಪ್ರಕಟಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next