Advertisement

Haryana Election: ಹರಿಯಾಣ ಚುನಾವಣೆಗೆ 67 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

09:33 AM Sep 05, 2024 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳ 5ರಂದು ಹರಿಯಾಣ ವಿಧಾನ ಸಭೆ ಚುನಾವಣೆಗಾಗಿ ಬಿಜೆಪಿ 90 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಿಗೆ ಬುಧವಾರ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

Advertisement

ಸಿಎಂ ನಯಾಬ್‌ ಸಿಂಹ್‌ ಸೈನಿ ಲಾಧ್ವಾ ಕ್ಷೇತ್ರದಿಂದ, ಮಾಜಿ ಸಚಿವ ಅನಿಲ್‌ ವಿಜ್‌ ಅಂಬಾಲಾ ಕಂಟೋನ್ಮೆಂಟ್‌ನಿಂದ ಸ್ಪರ್ಧಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಕಾರ್ತಿಕೇಯ ಶರ್ಮಾ ತಾಯಿ ಶಕ್ತಿರಾಣಿ ಶರ್ಮಾ ಕಲ್ಕಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಈ ಪಟ್ಟಿಯಲ್ಲಿ ಹಾಲಿ ಸಚಿವ ರೊ ಬ್ಬರು, 9 ಮಂದಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಮಾಜಿ ಡಿಸಿಎಂ ದುಷ್ಯಂತ್‌ ಚೌಟಾಲಾ ನೇತೃತ್ವದ ಜನ ನಾಯಕ ಜನತಾ ಪಕ್ಷ 19 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಬಿಜೆಪಿ 67 ಮಂದಿಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ಗಮನಾರ್ಹವಾಗಿದೆ. ಹಲವು ಪ್ರಮುಖರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಇದನ್ನೂ ಓದಿ: Arrested: ಶಿವಾಜಿ ಪ್ರತಿಮೆ ಕುಸಿತ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಜಯದೀಪ್ ಆಪ್ಟೆ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next