Advertisement

NEET-UG ಪ್ರಶ್ನೆಪತ್ರಿಕೆ ಸೋರಿಕೆ ಲಾಭ 100 ಜನಕ್ಕೆ

01:15 AM Jul 16, 2024 | Team Udayavani |

ಹೊಸದಿಲ್ಲಿ: ನೀಟ್‌ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯು ಸಾಂಸ್ಥಿಕ ವೈಫ‌ಲ್ಯವಲ್ಲ. ಅಥವಾ ಸಂಘಟಿತ ಅಪರಾಧ ಗ್ಯಾಂಗ್‌ ಕೂಡ ಮಾಡಿಲ್ಲ. ಸೋರಿಕೆ ವ್ಯಾಪ್ತಿ ಸೀಮಿತವಾಗಿತ್ತು ಎಂದು ಖಾಸಗಿ ವಾಹಿನಿಯೊಂದು ಸಿಬಿಐ ಮೂಲಗಳನ್ನು ಉಲ್ಲೇಖೀಸಿ ವರದಿ ಮಾಡಿದೆ. ನೀಟ್‌ ಪರೀಕ್ಷೆ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸಮಗ್ರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

Advertisement

ಸೋರಿಕೆ ಎಷ್ಟರ ಮಟ್ಟಿಗೆ ಆಗಿದೆ ಮತ್ತು ಒಟ್ಟಾರೆ ಏನಾಗಿತ್ತು ಎಂಬುದು ಸಂಪೂರ್ಣ ಚಿತ್ರಣ ದೊರೆತಿದೆ. ಅದೇ ಮಾಹಿತಿಯನ್ನು ಕೋರ್ಟ್‌ ಜತೆ ಹಂಚಿಕೊಂಡಿದ್ದೇವೆ. ಏನಾಯಿತು, ಯಾವ ಸಮಯದಲ್ಲಿ ನಡೆಯಿತು, ಎಷ್ಟು ಗಂಟೆ ಕಾಲ ಸೋರಿಕೆಯಾಗಿತ್ತು ಅದರ ಲಾಭ ಪಡೆದವರಾರರು ಎಂಬ ಮಾಹಿತಿ ವರದಿಯಲ್ಲಿದೆ. ಸೋರಿಕೆ ಲಾಭ ಪಡೆದವರ ಪಟ್ಟಿಯನ್ನು ಜು.17ಕ್ಕೆ ಕೋರ್ಟ್‌ಗೆ ನೀಡಲಾಗುವುದು ಎನ್ನಲಾಗಿದೆ.

ಸೋರಿಕೆ ಲಾಭ ಪಡೆದವರ ಸಂಖ್ಯೆ ದೊಡದ್ದಿಲ್ಲ, ಬಹಳ ಎಂದರೆ 100 ಮಂದಿ ಸಿಕ್ಕಿರಬಹದು. ಅವರನ್ನು ಗುರುತಿಸುವ ಅಂತಿಮ ಹಂತದಲ್ಲಿದ್ದೇವೆ.ಸೋರಿಕೆ ಸಂಘಟಿತವಾಗಿ ನಡೆದಿಲ್ಲ. ವ್ಯಕ್ತಿಮಟ್ಟದಲಿ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next