Advertisement

NEET: ಕರ್ನಾಟಕ ಸೇರಿ ದೇಶದ್ಯಾಂತ 700 ಮಂದಿಗೆ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ?

11:39 PM Jun 25, 2024 | Team Udayavani |

ಹೊಸದಿಲ್ಲಿ: ಕರ್ನಾಟಕ ಸೇರಿ ದೇಶದ 700 ಅಭ್ಯರ್ಥಿಗಳಿಗೆ 2024ರ ನೀಟ್‌ ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಂಡಿಯಾ ಟುಡೇ ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಸದಸ್ಯ ಎನ್ನಲಾದ ಬಿಜೇಂದ್ರ ಗುಪ್ತಾ ಹಲವು ಮಾಹಿತಿ ನೀಡಿದ್ದಾನೆ.

Advertisement

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಸಂಜೀವ್‌ ಮುಖೀಯಾ 100ರಿಂದ 200 ಕೋಟಿ ರೂ. ಸಂಪಾದಿಸಲು ಬಿಹಾರ ಮಾತ್ರವಲ್ಲದೇ, ಕರ್ನಾಟಕ, ಮಧ್ಯ ಪ್ರದೇಶ ಸೇರಿ ದೇಶ ವಿವಿಧ ಸ್ಥಳಗಳ 700 ವಿದ್ಯಾರ್ಥಿಗಳಿಗೆ ಪಶ್ನೆಪತ್ರಿಕೆ ಹಂಚಿದ್ದಾನೆ. ಆತ ಪ್ರತಿ ಪತ್ರಿಕೆಗೆ 40 ಲಕ್ಷ ರೂ. ಚಾರ್ಜ್‌ ಮಾಡುತ್ತಿದ್ದ ಎಂದಿದ್ದಾನೆ. ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವ ಹಂತದಲ್ಲೇ ಸೋರಿಕೆ ನಡೆಯುತ್ತಿದೆ ಎಂಬುದೂ ಸೇರಿ ಕಾನೂನು ಬಾಹಿರವಾಗಿರುವ ಇಡೀ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾನೆ.

ಈ ಮಧ್ಯೆ ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಬಂಧಿತರಾಗಿದ್ದ ಶಿಕ್ಷಕರಿಬ್ಬರ ಕಸ್ಟಡಿ ಅವಧಿಯನ್ನು ಜುಲೈ 2ರ ತನಕ ವಿಸ್ತರಿಸಲಾಗಿದೆ. ಮತ್ತೂಂದಡೆ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶ ಸರಕಾರ, ಹೊಸ ಕಾನೂನನ್ನು ಅಧ್ಯಾದೇಶದ ಮೂಲಕ ಜಾರಿ ಮಾಡಿದೆ. ಈ ಕಾನೂನು ಪ್ರಕಾರ, ತಪ್ಪಿತಸ್ಥರಿಗೆ 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next