Advertisement

ನೀಟ್ ಪರೀಕ್ಷೆ ಹಿನ್ನೆಲೆ: ಹುಬ್ಬಳ್ಳಿ- ಗಂಗಾವತಿ ರೈಲು ಸಂಚಾರ ಸಮಯ ಬದಲಾವಣೆ

08:25 PM Sep 09, 2021 | Team Udayavani |

ಗಂಗಾವತಿ:ಸೆ.12 ರಂದು ಹುಬ್ಬಳ್ಳಿಯಲ್ಲಿ ನಡೆಯುವ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಗಂಗಾವತಿ ರೈಲು ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಸದ ಕರಡಿ ಸಂಗಣ್ಣನವರ ಆಪ್ತಕಾರ್ಯದರ್ಶಿ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಸೆ.12 ರಂದು ಹುಬ್ಬಳ್ಳಿಯ ವಿವಿಧ ಕಾಲೇಜುಗಳಲ್ಲಿ ಆಯೋಜಿಸಿರುವ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಗಂಗಾವತಿ ರೈಲು ಸಂಚಾರದ ಸಮಯವನ್ನು  ರೈಲ್ವೆ ಇಲಾಖೆ ಬದಲಾಯಿಸಿದೆ. ಕೊಪ್ಪಳ ಬಳ್ಳಾರಿ ರಾಯಚೂರು ಜಿಲ್ಲೆಗಳ ವಿದ್ಯಾರ್ಥಿಗಳು ಹುಬ್ಬಳ್ಳಿಗೆ ಹೋಗಿ ನೀಟ್ ಪರೀಕ್ಷೆ ಬರೆದು ವಾಪಸ್ ಗಂಗಾವತಿಗೆ ಮರಳಲು ಅನುಕೂಲವಾಗುವಂತೆ ಸೆ.12ರಂದು ಗಂಗಾವತಿಯಿಂದ ಬೆಳಿಗ್ಗೆ ರೈಲು 6 ಗಂಟೆಗೆ ಹುಬ್ಬಳ್ಳಿಗೆ ಹೊರಡಲಿದೆ.

ಇದನ್ನೂ ಓದಿ:ಗಣೇಶ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ ; ಇಲ್ಲಿದೆ ಸೌಹಾರ್ದ ಸಂದೇಶ

ಸಂಜೆ ಹುಬ್ಬಳ್ಳಿಯಿಂದ 5 ಗಂಟೆಗೆ ಬದಲಿಗೆ ಸೆ.12 ರಂದು ಸಂಜೆ 6ಗಂಟೆಗೆ ಹುಬ್ಬಳ್ಳಿಯಿಂದ ಗಂಗಾವತಿಗೆ ಆಗಮಿಸಲಿದೆ ವಿದ್ಯಾರ್ಥಿಗಳು ಇದನ್ನು ಗಮನಿಸಿ ರೈಲ್ವೆ ಸಂಚಾರದ ಸಮಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಜೋಶಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next