Advertisement

ನೀಟ್‌ ಡೇಟಾ ಸೋರಿಕೆ: ತನಿಖೆಗೆ ರಾಹುಲ್‌ ಗಾಂಧಿ ಆಗ್ರಹ

05:06 PM Jul 24, 2018 | udayavani editorial |

ಹೊಸದಿಲ್ಲಿ : ನೀಟ್‌ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳ ಡೇಟಾ ಬೃಹತ್‌ ಪ್ರಮಾಣದಲ್ಲಿ ಸೋರಿಕೆಯಾಗಿರುವ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಿಬಿಎಸ್‌ಇ ಗೆ ಪತ್ರ ಬರೆದು ಹಗರಣದ ತನಿಖೆಯನ್ನು ಆಗ್ರಹಿಸಿದ್ದಾರೆ. 

Advertisement

ಈ ರೀತಿಯ ಡೇಟಾ ಸೋರಿಕೆ ಘಟನೆ ಮುಂದಿನ ದಿನಗಳಲ್ಲಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪರಿಣಾಮಕಾರಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಹುಲ್‌ ಅವರು ಸಿಬಿಎಸ್‌ಇ ಅಧ್ಯಕ್ಷೆ ಅನಿತಾ ಕರವಾಲ್‌ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ನೀಟ್‌ ಪರೀಕ್ಷೆ ಎದುರಿಸಿದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಖಾಸಗಿ ಮಾಹಿತಿಗಳು ಸೋರಿ ಹೋಗಿದ್ದು ಅವುಗಳೀಗ ಕೆಲವೊಂದು ವೆಬ್‌ ಸೈಟ್‌ಗಳಲ್ಲಿ  2 ಲಕ್ಷ ರೂ. ವರೆಗಿನ ದರಕ್ಕೆ  ಮಾರಾಟವಾಗುತ್ತಿವೆ; ಆದುದರಿಂದ ನೀವು ಈ ಬೃಹತ್‌ ಪ್ರಮಾಣದ ಡೇಟಾ ಸೋರಿಕೆ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ನಾನು ಆಗ್ರಹಿಸುತೆತàನೆ ಎಂದು ರಾಹುಲ್‌ ಪತ್ರದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next