Advertisement

ಸುರಕ್ಷಿತ ನೀಟ್‌ ಪರೀಕ್ಷೆಗೆ ಮಾರ್ಗಸೂಚಿ: ಇದೇ 13ರಂದು ದೇಶಾದ್ಯಂತ ಪರೀಕ್ಷೆ

12:28 AM Sep 11, 2020 | mahesh |

ನವದೆಹಲಿ: ನೀಟ್‌ ಪರೀಕ್ಷೆ ಮುಂದೂ­ಡು­ವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಪರೀಕ್ಷೆಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿ­ಸಿದೆ. ಇನ್ನೊಂದೆಡೆ, ಅ.4ರಂದು ನಡೆ­ಯುವ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಂಬಂಧಿಸಿ ಯುಪಿಎಸ್‌ಸಿ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Advertisement

ಸೆ.13ರಂದು ಎಲ್ಲ ನಿಯಮಗಳ ಅನ್ವಯ ಸುರಕ್ಷಿತವಾಗಿ ನೀಟ್‌ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಯಾರಿ­ಗಾದರೂ ಕೊರೊನಾ ಲಕ್ಷಣ ಕಂಡು­ಬಂದರೆ, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಐಸೋಲೇಟ್‌ ಮಾಡಿ, ವೈದ್ಯರಿಗೆ ಮಾಹಿತಿ ನೀಡಬೇಕು. ಮಾಸ್ಕ್, ಶಾರೀರಿಕ ಅಂತರ ಕಾಪಾಡಿಕೊಳ್ಳುವಿಕೆ, ಸ್ಯಾನಿಟೈಸರ್‌ ಬಳಕೆ ಮತ್ತಿತರ ಕಡ್ಡಾಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.

ಮಾರ್ಗಸೂಚಿಯಲ್ಲೇನಿದೆ?
ಕಂಟೈನ್ಮೆಂಟ್‌ ವಲಯದ ಹೊರಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರವೇ ಪರೀಕ್ಷೆ ನಡೆಸಬೇಕು. ಕಂಟೈನ್ಮೆಂಟ್‌ ವಲಯದ­ಲ್ಲಿರುವ ಸಿಬ್ಬಂದಿ ಅಥವಾ ಪರೀಕ್ಷಾರ್ಥಿ­ಗಳಿಗೆ ಪ್ರವೇಶವಿರುವುದಿಲ್ಲ. ಇವರಿಗೆ ಬೇರೆ ವಿಧಾನಗಳ ಮೂಲಕ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು.

ಪೆನ್‌ ಮತ್ತು ಪೇಪರ್‌ ಆಧಾರಿತ ಪರೀಕ್ಷೆ­ಯಿದ್ದಾಗ, ಆಯಾ ಕೊಠಡಿಯ ವೀಕ್ಷ­ಕರು ಪ್ರಶ್ನೆಪತ್ರಿಕೆ ಅಥವಾ ಉತ್ತರಪತ್ರಿಕೆಗಳನ್ನು ವಿತರಿಸುವ ಮುನ್ನ ಕೈಗಳನ್ನು ಸ್ವಚ್ಛಗೊಳಿಸಬೇಕು.

ಪರೀಕ್ಷಾರ್ಥಿಗಳು ಕೂಡ ಪತ್ರಿಕೆ ಸ್ವೀಕರಿ­ಸುವ ಮುನ್ನ ಮತ್ತು ವಾಪಸ್‌ ನೀಡಿದ ಬಳಿಕ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಬೇಕು

Advertisement

ಉತ್ತರಪತ್ರಿಕೆಗಳನ್ನು ಸಂಗ್ರಹಿಸಿದ 72 ಗಂಟೆಗಳ ಬಳಿಕವೇ ತೆರೆಯಬೇಕು ಶೀಟ್‌ಗಳನ್ನು ವಿತರಿಸುವಾಗ ಅಥವಾ ಲೆಕ್ಕ ಹಾಕುವಾಗ ಎಂಜಲು ಬಳಕೆ ಮಾಡುವಂತಿಲ್ಲ

ವೈಯಕ್ತಿಕ ವಸ್ತುಗಳು ಅಥವಾ ಸ್ಟೇಷನರಿ­ಗಳನ್ನು ಪರಸ್ಪರ ಹಂಚಿಕೊಳ್ಳುವಂತಿಲ್ಲ

ಆನ್‌ಲೈನ್‌ ಪರೀಕ್ಷೆಯಾಗಿದ್ದರೆ, ಪರೀಕ್ಷೆ ಮುನ್ನ ಆಲ್ಕೋಹಾಲ್‌ ವೈಪ್ಸ್‌ ಮೂಲಕ ಕಂಪ್ಯೂಟರ್ ಗಳನ್ನು ಸ್ವಚ್ಛಗೊಳಿಸಬೇಕು

ಪರೀಕ್ಷಾರ್ಥಿಗಳು ಮತ್ತು ಅಲ್ಲಿರುವ ಸಿಬ್ಬಂದಿ ತಮ್ಮ ಆರೋಗ್ಯದ ಕುರಿತ ಘೋಷಣಾ ಪತ್ರವನ್ನು ನೀಡಬೇಕು

ಪರೀಕ್ಷಾ ಕೊಠಡಿಗಳು, ವಿದ್ಯಾರ್ಥಿ­ಗಳನ್ನು ಕರೆದೊಯ್ಯಲು ಇರುವಂಥ ವಾಹನಗಳನ್ನೂ ಸ್ವಚ್ಛಗೊಳಿಸುತ್ತಿರಬೇಕು

Advertisement

Udayavani is now on Telegram. Click here to join our channel and stay updated with the latest news.

Next