ಪ್ಯಾರಿಸ್: ಪ್ಯಾರಿಸ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸಂಭವನೀಯ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯಕೀಯ ಸಲಹೆಯನ್ನು ಪಡೆಯಲು ಜರ್ಮನಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
”ನೀರಜ್ ಅವರು ಜರ್ಮನಿಗೆ ತೆರಳಿದ್ದು, ಕನಿಷ್ಠ ಒಂದು ತಿಂಗಳ ಮಟ್ಟಿಗೆ ಭಾರತಕ್ಕೆ ಮರಳುವ ಸಾಧ್ಯತೆ ಇಲ್ಲ ಎಂದು ಕುಟುಂಬದ ಮೂಲವೊಂದು ಪಿಟಿಐಗೆ ತಿಳಿಸಿದೆ.
ಮುಂಬರುವ ಪ್ರಮುಖ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ ಸ್ಪರ್ಧೆಗಳ ವಾರ್ಷಿಕ ಸರಣಿಯ ಡೈಮಂಡ್ ಲೀಗ್ ಸಭೆಯಲ್ಲಿ ಭಾಗವಹಿಸಬೇಕೆ ಎಂದು ನೀರಜ್ ನಿರ್ಧರಿಸಲಿದ್ದಾರೆ.
ಜರ್ಮನಿಗೆ ತೆರಳಿರುವ ಕುರಿತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮೂಲಗಳು ಖಚಿತಪಡಿಸಿವೆ. ಹೆಚ್ಚಿನ ವಿವರಗಳ ಬಗ್ಗೆ ತಿಳಿದಿಲ್ಲ, ಆದರೆ ಖಚಿತವಾಗಿ ಜರ್ಮನಿಯಲ್ಲಿ ವೈದ್ಯರನ್ನು ಸಂಪರ್ಕಿಸುತ್ತಾರೆ” ಎಂದು ಹೇಳಿವೆ.
ಜೂನ್‌ನಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಗೆದ್ದ ನಂತರ, ಚೋಪ್ರಾ ತನ್ನ ಗಾಯದ ಸಮಸ್ಯೆ ಪರಿಹರಿಸಲು ಪ್ಯಾರಿಸ್ ಒಲಿಂಪಿಕ್ಸ್ ನಂತರ ವೈದ್ಯರನ್ನು ಸಂಪರ್ಕಿಸುವುದಾಗಿ ಹೇಳಿದ್ದರು.