Advertisement

Doha Diamond League ಪ್ರಶಸ್ತಿ ಗೆದ್ದ ನೀರಜ್ ಚೋಪ್ರಾ

08:30 AM May 06, 2023 | Team Udayavani |

ದೋಹಾ: ಟೋಕಿಯೋ ಒಲಿಂಪಿಕ್ಸ್‌ ಚಾಂಪಿಯನ್‌, ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

Advertisement

ಖತರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೀರ​ಜ್‌ ಕಳೆದ ವರ್ಷ ಜ್ಯುರಿಚ್‌ನಲ್ಲಿ ನಡೆ​ದಿದ್ದ ಡೈಮಂಡ್‌ ಲೀಗ್‌ ಫೈನ​ಲ್‌​ನ​ಲ್ಲಿ ಚಾಂಪಿ​ಯನ್‌ ಆಗಿ​, ಈ ಸಾಧನೆ ಮಾಡಿದ ಮೊದಲ ಭಾರ​ತೀಯ ಎಂಬ ಹೆಗ್ಗ​ಳಿ​ಕೆಗೆ ಪಾತ್ರ​ರಾ​ಗಿ​ದ್ದರು.

ಈ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ದೋಹಾ ಡೈಮಂಡ್ ಲೀಗ್ -2023 ಗೆಲ್ಲುವ ಮೂಲಕ ತಮ್ಮ ಋತುವನ್ನು ಆರಂಭಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next