Advertisement

Neelakurinji: ಸೌಂದರ್ಯ ಗಣಿ ನೀಲಕುರಿಂಜಿ

12:54 PM Dec 16, 2023 | Team Udayavani |

ತೇಜಸ್ವಿಯವರ ಕರ್ವಾಲೋ ಓದಿದವರಿಗೆ ಗುರುಗಿ ಹುಳುವಿನ ಬಗ್ಗೆ ವಿಶೇಷ ಪರಿಚಯ ಮಾಡಿಕೊಡಬೇಕಾದ ವಿಶೇಷ ಅಗತ್ಯವಿಲ್ಲ. ನೀಲ ಕುರಿಂಜಿ ಎಂದೇ ಚಿರ ಪರಿಚಿತವಾದ ಇವುಗಳು ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳಲ್ಲಿ ಕಂಡು ಬರುತ್ತವೆ.

Advertisement

ಈ ಸುಂದರ ಹೂ ತಳೆಯುವ ಸಸ್ಯಗಳು ಅಕಾಂತೇಸಿ ( ಕನಕಾಂಬರ ಕುಟುಂಬ) ಕುಟುಂಬಕ್ಕೆ ಸೇರಿದ್ದು ಸುಮಾರು 46 ಪ್ರಜಾತಿಯ ಸಸ್ಯಗಳನ್ನು ಕಾಣಬಹುದು. ಇವುಗಳಲ್ಲಿ ‘ಸ್ಟ್ರೋಬಿಲ್ಯಾಂಥಸ್‌ ಕುಂಥಿಯಾನಾ’ ಎಂಬ ವೈಜ್ಞಾನಿಕ ನಾಮವುಳ್ಳ, 12 ವರ್ಷಕ್ಕೊಮ್ಮೆ ಮಾತ್ರ ಅರಳ್ಳೋ ಸಸ್ಯಗಳಂತೂ ಬಹಳ ಫೇಮಸ್ಸು…! ಆದರೆ 8 ವರ್ಷಕ್ಕೊಮ್ಮೆ ಹೂವನ್ನರಳಿಸುವ ಪ್ರಜಾತಿಯ ಸಸ್ಯಗಳು ನಮ್ಮ ಕರ್ನಾಟಕದಲ್ಲಿ ಹೆಚ್ಚು.

ಆದರೆ ತುಂಬಾ ಜನ ಗಮನಿಸದ ವಿಷಯವೋ ಏನೋ ಗೊತ್ತಿಲ್ಲ. ಗುಂಪಲ್ಲಿ ಅಲ್ಲದಿದ್ದರೂ ಗಿರಿಯ ಮೇಲಿರೋ ಅಸಂಖ್ಯಾತ ಹುಳುಗಳಲ್ಲಿ ಎಲ್ಲೋ ಕೆಲವಾರು ಗುರುಗಿ ಹುಳುಗಳು ಹೂವನ್ನು ತಳೆಯುತ್ತವೆ. ಇತ್ತೀಚೆಗೆ ದೇವಿರಮ್ಮ ಬೆಟ್ಟ ಹತ್ತುವಾಗ ಅಲ್ಲಲ್ಲಿ ಒಂದೊಂದು ಗಿಡಗಳಲ್ಲಿ ಹೂಗಳು ಅರಳಿದ್ದವು. ಹೋದ ವರ್ಷ ಮಾತ್ರ ಈ ಸಸ್ಯಗಳು ಅಸಂಖ್ಯಾತ ಹೂ ತಳೆದಿದ್ದಕ್ಕೋ ಏನೋ ಪ್ರವಾಸಿಗರ ದಂಡೇ ಚಿಕ್ಕಮಗಳೂರಿಗೆ ಆಗಮಿಸಿತ್ತು.

ನಿಸರ್ಗದ ಮೇಲಿನ ಕಾಳಜಿಗಿಂತ, ಹೂವಿನ ಸೌಂದರ್ಯವೇ ಹೆಚ್ಚಾಗಿ ಕಂಡಿದ್ದಕ್ಕೆ ಅನಾಗರಿಕರಂತೆ ದಂಡಿ ದಂಡಿಯಾಗಿ ಹೂಗಳನ್ನು, ಮತ್ತು ಅದರ ಸಸ್ಯಗಳನ್ನು ಕಿತ್ತು ತಮ್ಮ ಗಾಡಿಯ ಡಿಕ್ಕಿಯಲ್ಲಿ ತುಂಬಿಕೊಂಡು ಹೋಗಿದ್ದರು. ಆದ್ರೆ ವಿಶೇಷ ಅಂದ್ರೆ ಆ ಹೂವು ಯಾರ ಮನೆಯ ಕುಂಡದಲ್ಲೂ ಬೆಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ಆ ಹೂವು ಬೆಳೆಯುವ ವಿಶೇಷ ವಾತಾವರಣ ಇರುವುದು ನಮ್ಮ ಶೋಲಾ ಅರಣ್ಯಗಳಲ್ಲಿ ಮಾತ್ರ.

ಶೋಲಾ ಕೇವಲ ನೀಲಕುರಿಂಜಿಗಳಿಗಷ್ಟೇ ಅವಾಸವಲ್ಲ. ಜೀವ ಜಗತ್ತಿನ ಸಮತೋಲನಕ್ಕೆ ಇದೊಂದು ಪ್ರಧಾನ ಕೊಂಡಿ. ಕರ್ವಾಲೋದಲ್ಲಿ ನೀಲಕುರಿಂಜಿ ಅರಳಿದಾಗ ಜೇನುತ್ಪಾದನೆ ದಾಖಲೆ ಪ್ರಮಾಣದಲ್ಲಿ ಆಗುತ್ತದೆ ಎಂದು ನಾವೆÇÉಾ ಓದಿದ್ದೇವೆ. ಆದರೆ ಈಗ ಕಾಲ ಬದಲಾಗಿದೆ. ಜೇನ್ನೋಣಗಳ ಜತೆಗೆ ಶೋಲಾ ಪ್ರದೇಶವು ಕಣ್ಣರೆಯಾಗುತ್ತಿದೆ. ಜೇನುತ್ಪಾದನೆ ಕುಸಿಯುತ್ತಿದೆ.

Advertisement

ಒಂದೆಡೆ ಪ್ರವಾಸೋದ್ಯಮದ ಹೆಸರಲ್ಲಿ ತ್ಯಾಜ್ಯಗಳು ಕಣಿವೆಗಳನ್ನು ಸೇರುತ್ತಿದ್ದರೆ ಮತ್ತೂಂದೆಡೆ ಶೋಲಾ ಅರಣ್ಯವನ್ನು ಕಬಳಿಸುತ್ತಾ ಬರುತ್ತಿರೋ ಕಾಫಿ, ರಬ್ಬರ್‌ ಬೆಳೆ ಪ್ರದೇಶ ವಿಸ್ತರಣೆ, ಹೊಸ ರಸ್ತೆ, ಅಣೆಕಟ್ಟುಗಳ ನಿರ್ಮಾಣ, ನದಿ ತಿರುವಿನಂತ ಯೋಜನೆಗಳು ಪ್ರಕೃತಿಯ ಮೇಲೆ ಅಪಚಾರವೆಸಗುತ್ತಿವೆ. ಅನಿವಾರ್ಯತೆ ಹೊರತು ಪಡಿಸಿ ಅನಗತ್ಯವಾದ ಇಂತಹ ಅನೇಕ ಯೋಜನೆಗಳಿಗೆ ಅಂಕುಶ ಬೀಳಲೇ ಬೇಕಾದ ತುರ್ತು ಅಗತ್ಯವಿದೆ.

-ಅನುರಾಗ್‌ ಗೌಡ

ಎಸ್‌ಡಿಎಂ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next