ಡರ್ಬಿ: ಐಸಿಸಿ ವನಿತಾ ವಿಶ್ವಕಪ್ ಅಂತಿಮ ಹಂತ ತಲುಪಿದೆ. ಲೀಗ್ ಹಂತದಲ್ಲಿ ಇನ್ನೊಂದು ಸುತ್ತಿನ ಪಂದ್ಯಗಳು ಬಾಕಿ ಉಳಿದಿದ್ದು ಈಗಾಗಲೇ ಆತಿ ಥೇಯ ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ತಲು ಪಿರುವುದನ್ನು ಖಚಿತಪಡಿ ಸಿದೆ. ಇನ್ನೊಂದು ಸ್ಥಾನಕ್ಕಾಗಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಮೊದಲ ಆರು ಪಂದ್ಯಗಳ ಬಳಿಕ ತಲಾ ಐದರಲ್ಲಿ ಗೆದ್ದಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಲಾ 10 ಅಂಕದೊಂದಿಗೆ ಮೊದ ಲೆರಡು ಸ್ಥಾನ ಪಡೆದಿವೆ. ಉತ್ತಮ ರನ್ ಧಾರಣೆಯ ಆಧಾರದಲ್ಲಿ ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿದೆ. 9 ಅಂಕ ಹೊಂದಿರುವ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ನಾಲ್ಕು ಮತ್ತು ಐದನೇ ಸ್ಥಾನದಲ್ಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ಅನುಕ್ರಮವಾಗಿ 8 ಮತ್ತು 7 ಅಂಕ ಹೊಂದಿದೆ.
ಲೀಗ್ ಹಂತದ ಅಂತಿಮ ಸುತ್ತಿನ ಪಂದ್ಯಗಳು ಜುಲೈ 15ರ ಶನಿವಾರ ನಡೆಯಲಿದೆ. ಆಸ್ಟ್ರೇಲಿಯ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದರೆ, ಇಂಗ್ಲೆಂಡ್ ತಂಡವು ಶ್ರೀಲಂಕಾದ ಸವಾಲಿಗೆ ಉತ್ತರಿಸಲಿದೆ. ಭಾರತವು ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ಥಾನವು ಶ್ರೀಲಂಕಾದೆದುರು ಸೆಣಸಾಡಲಿದೆ. ಇಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಮೊದಲೆರಡು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆಯಿಲ್ಲ. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣ ಪಂದ್ಯದ ವಿಜೇತ ತಂಡ ಸೆಮಿ ಫೈನಲ್‌ನಲ್ಲಿ ಆಡಲು ಅರ್ಹತೆ ಗಳಿಸಲಿದೆ. ಸೆಮಿಫೈನಲ್ ಅಂಕಪಟ್ಟಿಯಲ್ಲಿ ಯಾವ ಸ್ಥಾನ ಸಿಗಬಹುದೆಂದು ಈ ಪಂದ್ಯಗಳ ಫಲಿತಾಂಶದ ಬಳಿಕ ನಿರ್ಧಾರವಾಗಲಿದೆ.
ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಸೆಮಿಫೈನಲಿಗೇರುವ ಆಸೆ ಮೂಡಿಸಿದ್ದ ಭಾರತವು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಸಂಕಷ್ಟಕ್ಕೆ ಬಿತ್ತು. ಇನ್ನು ಸೆಮಿಫೈನಲ್ ತಲುಪಬೇಕಾದರೆ ನ್ಯೂಜಿ ಲ್ಯಾಂಡ್ ತಂಡವನ್ನು ಸೋಲಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಉಭಯ ತಂಡಗಳ ಬಲಾಬಲವನ್ನು ಗಮನಿಸಿದರೆ ಭಾರತವೇ ಗೆಲ್ಲುವ ಫೇವರಿಟ್ ತಂಡವೆಂದು ಹೇಳಬಹುದು. ಆದರೆ ನ್ಯೂಜಿ ಲ್ಯಾಂಡ್ ತಂಡವನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ.