Advertisement
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬಂಗಾಲ ಪರ ನಾಯಕ ಅನುಸ್ತೂಪ್ ಮಜುಮಾªರ್ ಶತಕ ಬಾರಿಸಿ ಮಿಂಚಿದರು. ಸುದೀಪ್ ಚಟರ್ಜಿ ಅರ್ಧ ಶತಕ ಹೊಡೆದರು. ಶಾಬಾಜ್ ಅಹ್ಮದ್ ಅಜೇಯ 54 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲನೇ ದಿನದಾಟ ಮಂದಬೆಳಕಿನ ಕಾರಣ ಅರ್ಧ ಗಂಟೆ ಮುಂಚಿತವಾಗಿ ಮುಗಿಯಿತು.
Related Articles
Advertisement
ಅಭಿಲಾಷ್ ಶೆಟ್ಟಿ ಮೊದಲ ಆಟಕರ್ನಾಟಕದ ಪರ ಬಲಗೈ ವೇಗಿ ವಾಸುಕಿ ಕೌಶಿಕ್ 29 ರನ್ ನೀಡಿ 3 ವಿಕೆಟ್ ಉರುಳಿಸಿದರು. ಅಭಿಲಾಷ್ ಶೆಟ್ಟಿ, ಶ್ರೇಯಸ್ ಗೋಪಾಲ್ಗೆ ತಲಾ ಒಂದು ವಿಕೆಟ್ ಲಭಿಸಿದೆ. ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಡುಗಿಳಿಯಾರಿನ ಅಭಿಲಾಷ್ ಶೆಟ್ಟಿ ಅವರ ಪದಾರ್ಪಣ ರಣಜಿ ಪಂದ್ಯವಾಗಿದೆ. ಎಡಗೈ ಮಧ್ಯಮ ವೇಗಿಯಾಗಿರುವ ಅವರು ಅವಿನ್ ಘೋಷ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಅಭಿಲಾಷ್ ಅವರ ಮೊದಲ ದಿನದ ಬೌಲಿಂಗ್ ಸಾಧನೆ ಹೀಗಿತ್ತು: 15-4-52-1. ಸಂಕ್ಷಿಪ್ತ ಸ್ಕೋರ್: ಬಂಗಾಲ-5ಕ್ಕೆ 249 (ಅನುಸ್ತೂಪ್ ಮಜುಮಾªರ್ 101, ಸುದೀಪ್ ಚಟರ್ಜಿ 55, ಶಹಬಾಜ್ ಅಹ್ಮದ್ ಅಜೇಯ 54, ವಾಸುಕಿ ಕೌಶಿಕ್ 29ಕ್ಕೆ 3).