Advertisement

ಆರೋಗ್ಯ ವಿಮೆ ಬಗ್ಗೆ ಅರಿವು ಅಗತ

11:08 AM Mar 11, 2018 | Team Udayavani |

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರಿಗೆಂದು ರೂಪಿಸಿರುವ ಆರೋಗ್ಯ ವಿಮಾ ಯೋಜನೆಗಳ ಬಗ್ಗೆ ವೈದ್ಯರು ಜನರಲ್ಲಿ ಜಾಗೃತಿ ಮೂಡಿಸಿ ಬಳಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಮಣಿಪಾಲ್‌ ಉನ್ನತ ಶಿಕ್ಷಣ ಅಕಾಡೆಮಿ ಸಮ ಕುಲಾಧಿಪತಿ ಡಾ.ಎಚ್‌. ಸುಭಾಷ್‌ಕೃಷ್ಣ ಬಲ್ಲಾಳ್‌ ಹೇಳಿದರು.

Advertisement

ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರ ದಲ್ಲಿ ಶನಿವಾರ ನಡೆದ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿ ಪ್ರದಾನ ಸಮಾರಂಭದಲ್ಲಿ ಎಂಬಿಬಿಎಸ್‌ ಹಾಗೂ ಎಂಎಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ವಿಮಾ ಯೋಜನೆಯ ಸೌಲಭ್ಯಗಳು ಜನರಿಗೆ ತಲುಪುತ್ತಿಲ್ಲ. ವಿಮಾ ಯೋಜನೆಗಳ ಬಗ್ಗೆ ಜನರಲ್ಲಿ ವೈದ್ಯರು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಒಂದೆಡೆ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೆಂದ್ರಗಳು ಶೋಚನೀಯ ಸ್ಥಿತಿಯಲ್ಲಿದ್ದರೆ ಇನ್ನೊಂದೆಡೆ ಔಷಧಗಳ ಬೆಲೆ ಹೆಚ್ಚುತ್ತಿರುವುದರಿಂದ ಬಡ ರೋಗಿ ಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ದೇಶದ ಎಲ್ಲ ಫಾರ್ಮಸಿ ಮತ್ತು ವೈದ್ಯ ಕೀಯ ಕಾಲೇಜುಗಳಲ್ಲಿ ಜನರಿಕ್‌ ಔಷಧ ಮಳಿಗೆಗಳನ್ನು ತೆರೆದು ಸಾಮಾನ್ಯ ರೋಗಿ ಗಳಿಗೂ ಗುಣಮಟ್ಟದ ಔಷಧ ದೊರೆಯುವಂತೆ ಮಾಡಬೇಕು ಎಂದರು. 

ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ ವೈದ್ಯರ ಕೊರತೆ ತೀವ್ರವಾಗಿದೆ. ಹಾಗಾಗಿ ವೈದ್ಯಕೀಯ ವಿದ್ಯಾರ್ಥಿಗಳು ಕಲಿಕೆ ಜತೆಗೆ ಸಂಶೋಧನಾ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್‌.ಬೆಟ್ಟೇಗೌಡ, ಉಪಾಧ್ಯಕ್ಷ ಡಾ.ಶಿವಲಿಂಗಯ್ಯ, ಎನ್‌.ಪ್ರಸನ್ನ, ಪ್ರ. ಕಾರ್ಯದರ್ಶಿ ಎಂ.ನಾಗರಾಜ್‌ ಇದ್ದರು.

ಸ್ನಾತಕೋತ್ತರ ಪದವಿ ಪ್ರದಾನ
ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದ 75 ಹಾಗೂ ಎಂಬಿಬಿಎಸ್‌ ಪದವಿ ಪಡೆದ 129 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಡಾ.ಅಕ್ಷತಾ ರಾವ್‌ ಹಾಗೂ ಡಾ.ಕಾರ್ತಿಕ್‌ ಅಡಿಗ ತಲಾ ಮೂರು ಚಿನ್ನದ ಪದಕ, ಡಾ.ಎಸ್‌ .ಪ್ರಿಯಾ ಒಂದು ಚಿನ್ನದ ಪದಕ ಪಡೆದಿದ್ದಾರೆ. ಸಂಸ್ಥೆಗೆ ಇದೇ ಮೊದಲ ಬಾರಿ ಜನರಲ್‌ ಸರ್ಜರಿಯಲ್ಲಿ ನಾಲ್ಕು ವಿದ್ಯಾರ್ಥಿಗಳು ರ್‍ಯಾಂಕ್‌ ಗಳಿಸಿದ್ದಾರೆ. ಗ್ರಾಮೀಣ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕಿದ್ದು, ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ನೀಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚಿಂತಿಸಿ ನಿರ್ಧರಿಸಲಾಗುವುದು ಎಂದು ಡಾ.ಅಕ್ಷತಾ ರಾವ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next