Advertisement
ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಮಂಗಳವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಹಿಂದೂ ಸಮಾಜೋತ್ಸವ ಹಾಗೂ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
Related Articles
ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಮಹತ್ ಕಾರ್ಯ ಸಾಧನೆಗೆ ಸಂಕಲ್ಪ ಅತಿ ಮುಖ್ಯ. ಭಾರತದ ಶಕ್ತಿ ಬೆಳೆಯುತ್ತಿದೆ. ಕೆಲವರ ಶಕ್ತಿ ಕುಂಬಳ ಕಾಯಿಯಂತೆ ಒಳಗೊಳಗೆ ಕೊಳೆಯುತ್ತಿದೆ. ಭಾರತವು ಮತ್ತೂಮ್ಮೆ ಜಗದ್ಗುರುವಾಗಲಿದೆ. ನಮ್ಮ ಮೇಲೆ ಆಗಬಹುದಾದ ಆಕ್ರಮಣ ಗಳನ್ನು ಸಂಘಟಿತರಾಗಿ ತಡೆಯಬೇಕು ಎಂದು ಸಲಹೆ ನೀಡಿದರು.
Advertisement
ಲವ್ ಜೆಹಾದ್‌ಗೆ ಸಮರ್ಥ ಉತ್ತರಬೋಪಾಲ್ನ ಮಹಾಮಂಡ ಲೇಶ್ವರ ಶ್ರೀ ಅಖೀಲೇಶ್ವರಾನಂದ ಗಿರಿ ಮಹಾರಾಜ್ ಮಾತನಾಡಿ, ಭಾರತ
ವನ್ನು ಒಡೆಯುವ ಶಕ್ತಿಗಳ ವಿರುದ್ಧ ದೇಶದ ಸಮಗ್ರತೆಗಾಗಿ ನಿರಂತರ ಸಂಘಟಿತ ಸಂಘರ್ಷ ಮಾಡುತ್ತಿರುತ್ತೇವೆ. ಲವ್ ಜೆಹಾದ್‌ಗೆ ಹಿಂದೂ ಸಮಾಜ ಸರಿಯಾದ ಉತ್ತರ ನೀಡಬೇಕು. ಸನಾತನ ಎನ್ನುವುದು ಜಾತಿ, ವರ್ಣವಲ್ಲ. ಅದು ಜೀವನ ಮೌಲ್ಯ ಎಂದು ಹಿಂದೂ ಸಮಾಜ ಸಂಘಟಿತವಾಗಬೇಕಾದ ಅಗತ್ಯಗಳ ಬಗ್ಗೆ ವಿವರಿಸಿದರು. ಆರೆಸ್ಸೆಸ್‌ನ ಪ್ರಾಂತ ಸಹಕಾರ್ಯ ವಾಹ ಪಿ.ಎಸ್. ಪ್ರಕಾಶ್ ಮಾತನಾಡಿ, ಶೌರ್ಯ ರಹಿತ ಸಮಾಜಕ್ಕೆ ಸಾವು ನಿಶ್ಚಿತ. ಹಿಂದೂ ಸಮಾಜ ಶೌರ್ಯವಂತ ಸಮಾಜ. ನಾವೀಗ ಶಾರೀರಿಕ ಹಾಗೂ ವೈಚಾರಿಕ ಆಕ್ರಮಣವನ್ನು ತಡೆಯಬೇಕು. ಭಾರತದ ಗೆಲುವಿನ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು ಎಂದು ತಿಳಿಸಿದರು. ದೇಶ ರಕ್ಷಣೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮನೋಹರ ಶೆಟ್ಟಿ ಮಾತನಾಡಿ, ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳಬೇಕು. ನಾವಾಗಿ ಯಾರಿಗೂ ತೊಂದರ ನೀಡ ಬಾರದು. ಆದರೆ ನಮಗೆ ತೊಂದರೆ ಕೊಡುವವರಿಗೆ ಸ್ಪಷ್ಟ ಉತ್ತರ ನೀಡಲೇ ಬೇಕು. ಜಾತಿ, ಮತ ಭೇದ ಮರೆತು ನಾವೆಲ್ಲರೂ ಒಂದಾಗಬೇಕು ಎಂದು ಹೇಳಿದರು. ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಮಾತನಾಡಿ, ಇಡೀ ರಾಜ್ಯವೇ ಹಿಂದುತ್ವದ ಭದ್ರಕೋಟೆಯಾಗಲಿದೆ. ಬಜರಂಗದಳ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಿದೆ. ಜೆಹಾದಿ ಮಾನಸಿಕತೆಯನ್ನು ಹೇಗೆ ಹೋಗ ಲಾಸಡಿಸಬೇಕು ಎಂಬುದು ಗೊತ್ತಿದೆ. ಈ ರಾಷ್ಟ್ರವನ್ನು ಜಿಹಾದಿ ಮಾನಸಿಕತೆಗೆ ಹೋಗಲೂ ಬಿಡುವುದಿಲ್ಲ ಎಂದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್, ಉದ್ಯಮಿಗಳಾದ ಗಣೇಶ್ ಹೆಗ್ಡೆ, ಹರಿಯಪ್ಪ ಕೋಟ್ಯಾನ್, ಕಡ್ತಳ ವಿಶ್ವನಾಥ ಪೂಜಾರಿ ಪುಣೆ, ರಮೇಶ್ ಬಂಗೇರ, ರವೀಂದ್ರ ಶೆಟ್ಟಿ ಬಜಗೋಳಿ, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಬಜರಂಗ ದಳ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ, ಪ್ರಮುಖರಾದ ಮಹಾಬಲ ಹೆಗಡೆ, ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು. ಜಿಲ್ಲಾ ಸಂಯೋಜಕ ಚೇತನ್ ಪರಲ್ಕೆ ಸ್ವಾಗತಿಸಿದರು. ಅಜಿತ್ ಹಾಗೂ ಭಾಗ್ಯಶ್ರೀ ಐತಾಳ ನಿರೂಪಿಸಿದರು. ಕೇಸರಿ ಬಾವುಟಕ್ಕೆ 10 ಲಕ್ಷ ರೂ. ಬಾಂಡ್!
ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಪ್ರಸ್ತಾವನೆಗೈದು, ಕೇಸರಿ ಬಾವುಟ ಕಟ್ಟಲು ಪೊಲೀಸರು 10 ಲ.ರೂ.ಗಳ ಬಾಂಡ್ ಬರೆಸಿಕೊಂಡಿದ್ದಾರೆ. ಮುಂದೆ ಮನೆ ಮನೆಯಲ್ಲೂ ಕೇಸರಿ ಬಾವುಟ ಹಾರಿಸಲಿದ್ದೇವೆ. ಕೇಸರಿ ಬಾವುಟ ಹಾರಿಸಲು ಬಾಂಡ್ ಬರೆದುಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು. ಜೋಡುಕಟ್ಟೆಯಿಂದ ಭವ್ಯ ಶೋಭಾಯಾತ್ರೆ
ಶೌರ್ಯ ಜಾಗರಣ ರಥಯಾತ್ರೆಯನ್ನು ಜೋಡುಕಟ್ಟೆಯಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭಗೊಂಡ ಶೋಭಾಯಾತ್ರೆ ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್ ಬಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಎಂಜಿಎಂ ಮೈದಾನ ಪ್ರವೇಶಿಸಿದೆ. ಮೈದಾನದ ಸುತ್ತ ಕೇಸರಿ ಪತಾಕಿ, ಬಾವುಟದಿಂದ ಅಲಂಕರಿಸಲಾಗಿತ್ತು. ಪ್ರವೇಶದ್ವಾರದಲ್ಲಿ ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ವೀರ ಸಾವರ್ಕರ್, ಚಂದ್ರ ಶೇಖರ್ ಅಜಾದ್, ಛತ್ರಪತಿ ಶಿವಾಜಿ ಮಹಾರಾಜ್ ಮೊದಲಾದ ಮಹನೀಯರ ಭಾವಚಿತ್ರ ಅಳವಡಿಸಲಾಗಿತ್ತು. ಕಲಾವಿದ ಜಗದೀಶ್ ಪುತ್ತೂರು ಮತ್ತು ತಂಡದಿಂದ ದೇಶಭಕ್ತಿಗೀತೆ ಗಾಯನ ನಡೆಯಿತು.