Advertisement

ಪರಿಸರ ಸಂರಕ್ಷಣೆ ಅಗತ್ಯ: ನರೋತ್ತಮಾನಂದ ಸ್ವಾಮಿ

03:28 PM Feb 23, 2021 | Team Udayavani |

ಪಾತಪಾಳ್ಯ: ಪರಿಸರ ಸಂರಕ್ಷಣೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಸುಂದರ ಸಮಾಜ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಹೃಷಿಕೇಶ ಆಶ್ರಮದ ನರೋತ್ತಮಾನಂದ ಸ್ವಾಮಿ ಹೇಳಿದರು.

Advertisement

ಆಚಗಾನಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಪರಿಸರ ಮಹತ್ವದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ಪೂರ್ವಜರು ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿದ್ದರು. ಪರಿಸರವನ್ನು ಪೂಜ್ಯಭಾವದಿಂದ ನೋಡುತ್ತಿದ್ದರು. ಆದರೆ ಇಂದು ಮಾಯವಾಗುತ್ತಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ.

ಕಾಡು ನಾಶ ಮಾಡುವುದು ಸುಲಭ, ಬೆಳೆಸುವುದು ಕಠಿಣ. ಮಾನವಪರಿಸರ ವಿರುದ್ಧವಾಗಿ ನಡೆದುಕೊಳ್ಳುವುದರಿಂದ ವಾತಾವರಣದಲ್ಲಿ ಉಷ್ಣತೆಪ್ರಮಾಣ ಅಧಿಕಗೊಂಡಿದೆ. ಪರಸರ ಸಮತೋಲನಕ್ಕೆ ಭಂಗ ತಂದರೆ ನಮ್ಮನ್ನುನಾವೇ ನಾಶ ಮಾಡಿಕೊಂಡಂತೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಪ್ರಭಾರ ಮುಖ್ಯ ಶಿಕ್ಷಕ ಬಿ.ಎನ್‌.ಸೀನಪ್ಪ, ಶಿಕ್ಷಕರಾದ ಚಂದ್ರಶೇಖರಲಂಬಾಣಿ, ಟಿ.ದೇವೇಂದ್ರನಾಯ್ಕ, ಎನ್‌.ನಾಗರಾಜ್‌, ಸಿ.ಎಸ್‌.ಆಂಜಿನೇಯ, ಬಾಬು, ದೈಹಿಕ ಶಿಕ್ಷಣ ಶಿಕ್ಷಕ ಬಿ.ಎನ್‌.ಮಾರುತಿ ಇದ್ದರು.

ದೊಡ್ಡಗುಟ್ಟಹಳ್ಳಿಯಲ್ಲಿ ಉಕ್ಕಿ ಹರಿದ ಕೊಳವೆ ಬಾವಿ :

Advertisement

ಚಿಂತಾಮಣಿ: ಸಾವಿರಾರು ಅಡಿ ಕೊರೆದರೂದೊರೆಯದ ನೀರು ತಾಲೂಕಿನ ದೊಡ್ಡಗುಟ್ಟ ಹಳ್ಳಿಯ ಆನಂದ ಎಂಬುವರ ಕೊಳವೆಬಾವಿಯಲ್ಲಿ ಉಕ್ಕಿ ಹರಿಯುತ್ತಿರುವುದು ಆಶ್ಚರ್ಯ ಮೂಡುವಂತಾಗಿದೆ.

ಬರದ ನಾಡು ಕೊಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ರೈತರುನೀರಿಗಾಗಿ ಪರದಾಡುತ್ತಿರುವುದು ಸರ್ವೆ ಸಮಾನ್ಯವಾಗಿತ್ತು. ಆದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ಸುರಿದ ಜಡಿಮಳೆಯಿಂದ ಕೆರೆಕುಂಟೆ ಗಳಿಗೆ ಅಲ್ಪ ಸ್ವಲ್ಪ ನೀರು ಬಂದಿದ್ದು, ಇದರಿಂದ ಕೆಲ ಕೊಳವೆಬಾವಿಗಳು ರೀಚಾರ್ಜ್‌ ಆಗಿರು ವುದು ಸಾಮಾನ್ಯವಾಗಿದೆ. ಆದರೆ ತಾಲೂಕಿನ ಚಿಲಕಲನೇಪು ಹೋಬಳಿಯ ದೊಡ್ಡಗುಟ್ಟಹಳ್ಳಿ ಬಳಿ ಕೊಳವೆಬಾವಿಯಲ್ಲಿ ನೀರು ಉಕ್ಕಿ ಹರಿಯು ತ್ತಿರುವುದು ಆಶ್ಚರ್ಯಕರವಾಗಿದೆ.

2 ಕೊಳವೆಬಾವಿಗಳಲ್ಲಿ ಹರಿದ ನೀರು: ದೊಡ್ಡ ಗುಟ್ಟಹಳ್ಳಿಯ ಆನಂದ್‌ ಬಿನ್‌ ವೆಂಕಟರವಣಪ್ಪ ಎಂಬುವರು ಕೆಲ ವರ್ಷಗಳ ಹಿಂದೆ 1100 ಅಡಿ ಕೊರೆಸಿದ್ದು, ಸದರಿ ಕೊಳವೆಬಾವಿ ಕೆಲದ ದಿನಗಳ ನಂತರ ನಿಂತು ಹೋಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಆದ್ದರಿಂದಆನಂದ್‌ ಕಳೆದ ಡಿ.29 ರಂದು 190 ಅಡಿಯಷ್ಟು ಮತ್ತೂಂದು ಕೊರೆಸಿದ್ದಾರೆ. ಇದರಲ್ಲಿ ನೀರು ಸಾಕಷ್ಟು ಬಂದಿದ್ದರಿಂದ ಮೋಟಾರ್‌ ಪಂಪುಅಳವಡಿಸಿ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದು, ಕೆಲವೇದಿನಗಳಲ್ಲೇ ಕೊಳವೆ ಬಾವಿಯಲ್ಲಿ ನೀರು ಉಕ್ಕಿಹರಿದಿದೆ. ಈ ಹಿಂದೆ ಕೊರೆಸಿದ್ದ 1100 ಅಡಿಯಕೊಳವೆ ಬಾವಿಯಲ್ಲೂ ಸಹ ನೀರು ಉಕ್ಕಿ ಹರಿಯುತ್ತಿರುವುದು ಆನಂದ್‌ ಅವರ ಸಂಭ್ರಮಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next