Advertisement

ದುಬೈನಲ್ಲಿ ಕೇರಳ ನವದಂಪತಿಯ ಡ್ರೈವ್‌ ಬೈ ವೆಡ್ಡಿಂಗ್‌! ಕಾರಲ್ಲೇ ಕುಳಿತು ಹಾರೈಸಿದ ಅತಿಥಿಗಳು

10:35 PM Nov 15, 2020 | sudhir |

ದುಬೈ: ಭಾರತೀಯ ಮೂಲದ ವಧು-ವರರಿಬ್ಬರು ತಮ್ಮ ಮದುವೆ ರಿಸೆಪ್ಶನ್‌ ಸಮಯದಲ್ಲಿ ಸಾಮಾಜಿಕ ಅಂತರ ಪಾಲನೆಗೆ ಕಂಡುಕೊಂಡ ವಿಧಾನ ಈಗ ಸುದ್ದಿಯಾಗುತ್ತಿದೆ. ಅತಿಥಿಗಳೆಲ್ಲ ತಮ್ಮ ಕಾರಿನಲ್ಲೇ ಕುಳಿತು ಇವರಿಬ್ಬರಿಗೂ ಹಾರೈಸಿದ್ದಾರೆ.

Advertisement

ಮೊಹಮ್ಮದ್‌ ಜಝೆಮ್‌ ಮತ್ತು ಅಲ್ಮಾಸ್‌ ಅಹ್ಮದ್‌ರ ಮದುವೆ ರಿಸೆಪ್ಶನ್‌, ದುಬೈನಲ್ಲಿರುವ ಅವರ ಮನೆಯಲ್ಲೇ ನಡೆದಿತ್ತು.    ಮದುವೆಗೆ ಬರಲಾಗದವರನ್ನು ರಿಸೆಪ್ಶನ್‌ಗೆ ಆಹ್ವಾನಿಸಲಾಗಿತ್ತಾದರೂ, ಅವರಿಗೆ ಮನೆಯಲ್ಲಿ ಎಂಟ್ರಿ ನಿಷೇಧಿಸಲಾಗಿತ್ತು. ಅತಿಥಿಗಳು ಮನೆಯ ಹೊರಗೇ ಕಾರಲ್ಲಿ ಕುಳಿತು ಇಬ್ಬರಿಗೂ ಶುಭ ಹಾರೈಸಿ ಮುಂದೆ ಸಾಗಿದರು. ಇನ್ನು ಟ್ರಾಫಿಕ್‌ ಜಾಮ್‌ ಆಗಬಾರದು ಎನ್ನುವ ಕಾರಣಕ್ಕೆ ಪ್ರತಿ ಅತಿಥಿಗಳು ಕೆಲವೇ ಕ್ಷಣ ಕಾರನ್ನು ಮನೆಮುಂದೆ ನಿಲ್ಲಿಸಿ, ಅಲ್ಲಿ ಕುಳಿತೇ ಫೋಟೋ ತೆಗೆಸಿಕೊಂಡು, ಶುಭಹಾರೈಸಿ ಹೊರಟರಂತೆ!

ಇದನ್ನೂ ಓದಿ:ಭಾರತದ ವಿರುದ್ಧ ಸಾಕ್ಷ್ಯಗಳು ಪಾಕ್‌ನ ಕಟ್ಟುಕತೆ: ಅನುರಾಗ್ ಶ್ರೀವಾಸ್ತವ

Advertisement

Udayavani is now on Telegram. Click here to join our channel and stay updated with the latest news.

Next