ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತೊಮ್ಮೆ ಭಗವಾನ್ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ-ಜೆಡಿಯು ಸರ್ಕಾರದ ಮಿತ್ರ ಪಕ್ಷ ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರು ಭಗವಾನ್ ರಾಮನನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಅವರು ತನ್ನನ್ನು ಮಾತಾ ಶಬರಿಯ ವಂಶಸ್ಥನೆಂದು ಬಣ್ಣಿಸಿದ್ದು, ಆದರೆ ಮರ್ಯಾದಾ ಪುರುಷೋತ್ತಮನನ್ನು ಕಾಲ್ಪನಿಕ ಪಾತ್ರವೆಂದು ಪರಿಗಣಿಸುವುದಾಗಿ ಹೇಳಿದ್ದಾರೆ.
ಗುರುವಾರದ ಕಾರ್ಯಕ್ರಮವೊಂದರಲ್ಲಿ ಮಾಂಝಿ ಅವರು ಅಸ್ಪೃಶ್ಯತೆ ಸಮಸ್ಯೆ ಕುರಿತು ಮಾತನಾಡುತ್ತಾ, ಭಗವಾನ್ ರಾಮನ ಕುರಿತು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮನನ್ನು ನಂಬುವವರು ದಲಿತರ ಎಂಜಲು ಏಕೆ ತಿನ್ನುವುದಿಲ್ಲ ಎಂದು ಪ್ರಶ್ನಿಸಿದರು. ದೊಡ್ಡವರು ಅಧಿಕಾರಕ್ಕಾಗಿ ಜನರನ್ನು ಒಡೆದಿದ್ದಾರೆ ಎಂದರು.
“ನಾವು ತುಳಿದಾಸ್ ಜಿಯನ್ನು ನಂಬುತ್ತೇವೆ, ನಾವು ವಾಲ್ಮೀಕಿಯನ್ನು ನಂಬುತ್ತೇವೆ. ಆದರೆ ನಾವು ರಾಮನನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.
ಮಾಂಝಿ ಕಳೆದ ವರ್ಷವೂ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದರು ಮತ್ತು ರಾಮನನ್ನು ದೇವರೆಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು. ಭಗವಾನ್ ರಾಮನನ್ನು ಕಾಲ್ಪನಿಕ ಪಾತ್ರ ಎಂದು ಬಣ್ಣಿಸಿರುವ ಮಾಂಝಿ, ತಾನು ಎಂದಿಗೂ ಆತನನ್ನು ಪೂಜಿಸುವುದಿಲ್ಲ ಮತ್ತು ಆತನನ್ನು ಪೂಜಿಸದಂತೆ ತನ್ನ ಬೆಂಬಲಿಗರನ್ನು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದರು. ಬ್ರಾಹ್ಮಣರ ಬಗ್ಗೆಯೂ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು, ಸಾಕಷ್ಟು ರಾಜಕೀಯ ಆಕ್ರೋಶಗಳ ನಂತರ ಮಾಂಝಿ ಬ್ರಾಹ್ಮಣರಿಗೆ ಔತಣಕೂಟವನ್ನು ನೀಡುವ ಮೂಲಕ ಹಾನಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದರು.