ನವದೆಹಲಿ:ಹನ್ನೆರಡನೇ ತರಗತಿಯ ಇತಿಹಾಸ ಪಠ್ಯಪುಸ್ತಕದಿಂದ ಮೊಘಲ್ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ತೆಗೆದು ಹಾಕಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ಧರಿಸಿದೆ.
ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸುವ ತೀರ್ಮಾನವನ್ನೂ ಕೈಗೊಂಡಿದೆ. ಇದರಿಂದಾಗಿ ಸಿಬಿಎಸ್‌ಇ ಮತ್ತು ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಅನುಸರಿಸುವ ರಾಜ್ಯಗಳಲ್ಲಿನ ಇತಿಹಾಸ ಪಠ್ಯವೂ ಬದಲಾಗುವ ಸಾಧ್ಯತೆ ಇದೆ.
2023-24ನೇ ಶೈಕ್ಷಣಿಕ ವರ್ಷದಿಂದ ತರಬೇತಿ ಮಂಡಳಿ ಪರಿಷ್ಕೃತ ಪಠ್ಯಕ್ರಮವನ್ನು ಪರಿಚಯಿಸಲು ಉದ್ದೇಶಿಸಿತ್ತು.
“ಥೀಮ್ಸ್ ಆಫ್ ಇಂಡಿಯನ್ ಹಿಸ್ಟರಿ’ ಭಾಗ 2ರಿಂದ “ಕಿಂಗ್ಸ್ ಆ್ಯಂಡ್ ಕ್ರೋನಿಕಲ್ಸ್; ದ ಮೊಘಲ್ ಕೋರ್ಟ್ಸ್’ ಅನ್ನು ತೆಗೆದುಹಾಕಲಾಗಿದೆ. ಇದರ ಜತೆಗೆ “ಯುಎಸ್ ಹೆಜಿಮೊನಿ ಇನ್ ವರ್ಲ್ಡ್ ಪಾಲಿಟಿಕ್ಸ್’, “ದ ಕೋಲ್ಡ್ ವಾರ್ ಇರಾ’, “ದ ರೈಸ್ ಆಫ್ ಪಾಪ್ಯುಲರ್ ಮೂವ್‌ಮೆಂಟ್ಸ್’, “ಇರಾ- ಆಫ್ ವನ್ ಪಾರ್ಟಿ ಡಾಮಿನೆನ್ಸ್’ ಅನ್ನು ತೆಗೆಯಲಾಗಿದೆ.
ಜತೆಗೆ 10 ಮತ್ತು 11ನೇ ತರಗತಿಯ ಇತಿಹಾಸ ಪಠ್ಯದಲ್ಲಿ ಕೂಡ ಕೆಲವು ಅಂಶಗಳನ್ನು ತೆಗೆದು ಹಾಕಲಾಗಿದೆ. 11ನೇ ತರಗತಿಯ ಪಠ್ಯದಿಂದ “ಥೀಮ್ಸ್ ಇನ್ ವರ್ಲ್x ಹಿಸ್ಟರಿ,’ “ಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್ಸ್’, “ದಿ ಇಂಡಸ್ಟ್ರಿಯಲ್ ರೆವೊಲ್ಯೂಷನ್’ ಪಾಠಗಳನ್ನು ತೆಗೆದುಹಾಕಲಾಗಿದೆ.