Advertisement

‘ನಿಜವಾದ ವಿಚಾರ’ಮರೆ ಮಾಚಲು ಕ್ರೂಸ್ ಶಿಪ್ ಮೇಲೆ ದಾಳಿ : ಕಾಂಗ್ರೆಸ್

06:21 PM Oct 03, 2021 | Team Udayavani |

ಮುಂಬಯಿ : ಅದಾನಿ ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣದತ್ತ ಕೇಂದ್ರೀಕೃತವಾಗಿರುವ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿಯ ರಾಷ್ಟ್ರೀಯ ವಕ್ತಾರೆ, ಶಮಾ ಮೊಹಮದ್, ‘ಎನ್ ಸಿಬಿ ದೊಡ್ಡ ಮೀನು ಹಿಡಿಯುವ ಬದಲು ಸಣ್ಣ ಮೀನು ಹಿಡಿಯುವಲ್ಲಿ ನಿರತವಾಗಿದೆ , ನಿಜವಾದ ವಿಚಾರವನ್ನು ಮರೆ ಮಾಚಲು ಈ ದಾಳಿ ನಡೆಸಲಾಗಿದೆ’ ಎಂದರು.  ಅದಾನಿ ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒಳಪಡಿಸಲು ಮನವಿ ಮಾಡಿದರು.

ಮುಂಬಯಿಯ ಕರಾವಳಿ ತೀರದಲ್ಲಿ ಐಷಾರಾಮಿ ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3,000 ಕೆಜಿ ಹೆರಾಯಿನ್‌ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next