Advertisement
ಕೊಡಗು- ದಕ್ಷಿಣ ಕ್ನನಡ ಜಿಲ್ಲೆಯ ಗಡಿಯಲ್ಲಿರುವ ಸುಳ್ಯ ಸಮೀಪದ ಕೂಜಿಮಲೆ ಬಳಿ ನಕ್ಸಲರ ಪತ್ತೆಯಾಗಿದೆ. ಅಲ್ಲಿನ ಅಂಗಡಿಯೊಂದರಲ್ಲಿ ದಿನಸಿ ಪದಾರ್ಥಗಳನ್ನು ಖರೀದಿಸಿದ ನಾಲ್ವರನ್ನು ಅರಣ್ಯ ಇಲಾಖೆ ಸಿಬಂದಿ ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಮರುದಿನ ಅರಣ್ಯ ಇಲಾಖೆಯ ಸಿಬಂದಿ ಅದೇ ಅಂಗಡಿಗೆ ಹೋದಾಗ ವಿಚಾರ ತಿಳಿಯಿತು. ಸ್ಥಳೀಯ ಪೊಲೀಸರು, ನಕ್ಸಲ್ ನಿಗ್ರಹ ದಳದ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Related Articles
Advertisement
ನಾಗರಿಕ ಸಮಾಜದಲ್ಲಿ ಸಂವಿಧಾನದಡಿ ಹೋರಾಡಲಾಗದೆ ಸಾರ್ವಜನಿಕರನ್ನು ಆತಂಕಕ್ಕೆ ದೂಡುವುದು, ಕೂಲಿ-ಕಾರ್ಮಿಕರು, ಕಾಡಂಚಿನ ಜನರನ್ನು ಒತ್ತೆಯಾಳು ಗಳಾಗಿ ಇಟ್ಟುಕೊಳ್ಳುವುದು, ಸರಕಾರಗಳಿಗೆ ಸವಾಲೊಡ್ಡುವುದು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಲ್ಲದೇ ಹೊರತು, ಮತಾöವ ಪ್ರಯೋಜನವನ್ನೂ ತಂದು ಕೊಡುವುದಿಲ್ಲ. ಜನರಿಗಿಂದು ಎಲ್ಲರಿಂದಲೂ ನೆಮ್ಮದಿಯ ಜೀವನವಷ್ಟೇ ಬೇಕಿರುವುದು. ಸಾಮಾಜಿಕ ವ್ಯವಸ್ಥೆಯನ್ನು ಅಲ್ಲಾಡಿಸುತ್ತೇವೆ ಎಂದುಕೊಳ್ಳುವುದು ಇಂದಿನ ನಾಗರಿಕ ಸಮಾಜದಲ್ಲಿ ಸುಲಭವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೋರಾಟದ ಹೆಸರಿನಲ್ಲಿ ಜನರ ನೆಮ್ಮದಿ ಕೆಡಿಸಿದರೆ, ಜನರೇ ನಕ್ಸಲರ ವಿರುದ್ಧ ತಿರುಗಿ ಬೀಳುವ ಕಾಲವಿದು. ಹೋರಾಟ ಮಾಡುವುದೇ ಆದರೆ ಮುಖ್ಯವಾಹಿನಿಗೆ ಬಂದು ಹಕ್ಕೊತ್ತಾಯಗಳನ್ನು ಮಂಡಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ನ್ಯಾಯ ಪಡೆದ ಅನೇಕರು ನಕ್ಸಲ್ ಚಟುವಟಿಕೆಯಿಂದ ಹೊರಬಂದಿರುವುದೂ ಉಂಟು. ಈ ಬಗ್ಗೆ ಸರಕಾರ ಕೂಡ ಸಾಕಷ್ಟು ಜಾಗೃತಿಗಳನ್ನು ಮೂಡಿಸಿರುವುದೂ ಅಲ್ಲದೆ ಮುಖ್ಯವಾಹಿನಿಗೆ ಬರುವ ಅವಕಾಶಗಳನ್ನೂ ಮಾಡಿಕೊಟ್ಟಿದೆ.