Advertisement
ಕುಟುಂಬದವರು, ಊರಿನವರ ಸಹಿತ ಸುಮಾರು 150ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ವಿಕ್ರಂ ಗೌಡನ ಸಹೋದರ ಸುರೇಶ್ ನೇತೃತ್ವ, ತಂಗಿ ಸುಗುಣಾ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಎನ್‌ಕೌಂಟರ್ ನಡೆದ ಮಾಹಿತಿ ದೊರೆತ ಆರಂಭದಲ್ಲಿ ಸಹೋದರ ಹೊರತು ಪಡಿಸಿ ತಂಗಿ, ಕುಟುಂಬಿಕರು ಯಾರೂ ಘಟನೆ ನಡೆದ ಸ್ಥಳ ಹಾಗೂ ಶವವಿರಿಸಿದ್ದ ಆಸ್ಪತ್ರೆಗೆ ತೆರಳಿರಲಿಲ್ಲ. ಆರಂಭದಲ್ಲಿ ಶವಸಂಸ್ಕಾರ ನಡೆಸಲು ಹಿಂದೇಟು ಹಾಕಿದ್ದರು. ಅನಂತರದಲ್ಲಿ ಪೊಲೀಸರ ಮನವಿಗೆ ಸ್ಪಂದಿಸಿ ಶವಸಂಸ್ಕಾರ ಮನೆಯ ಕೃಷಿ ಭೂಮಿಯಲ್ಲಿ ನಡೆಸಲು ನಿರ್ಧರಿಸಲಾಯಿತು. ಅದಕ್ಕೂ ಮೊದಲು ಉಡುಪಿಯ ಬೀಡಿನಗುಡ್ಡೆಯಲ್ಲಿ ಶವಸಂಸ್ಕಾರ ನಡೆಸುವ ಬಗ್ಗೆಯೂ ನಿರ್ಧರಿಸಲಾಗಿತ್ತು. ಮರಣೋತ್ತರ ಪರೀಕ್ಷೆ
ವಿಕ್ರಂ ಗೌಡನ ಮೃತದೇಹವನ್ನು ಮಂಗಳವಾರ ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ತರಲಾಗಿತ್ತು. ತಡರಾತ್ರಿ 12 ಗಂಟೆ ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಆರಂಭಗೊಂಡು ಬುಧವಾರ ಬೆಳಗ್ಗಿನ ಜಾವ 5 ಗಂಟೆ ತನಕವೂ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ. ಶವಾಗಾರಕ್ಕೆ ಆಗಮಿಸಿದ್ದ ವಿಕ್ರಂ ಗೌಡ ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರಿಗೆ ಮೃತದೇಹವನ್ನು ತೋರಿಸಿ ಪೊಲೀಸರ ಸರ್ಪಗಾವಲಿನ ನಡುವೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾ ಯಿತು. ಮೃತದೇಹವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.
Related Articles
Advertisement