Advertisement

ನವಾಬ್ ಮಲಿಕ್ ಗೆ ಮುಂಬಯಿ ಸ್ಫೋಟದ ಆರೋಪಿಗಳ ಜತೆ ನಂಟಿದೆ: ಫಡ್ನವೀಸ್

01:46 PM Nov 09, 2021 | Team Udayavani |

ಮುಂಬಯಿ: ಎನ್ ಸಿಪಿ ಮುಖಂಡ, ಸಚಿವ ನವಾಬ್ ಮಲಿಕ್ 1993ರ ಸರಣಿ ಬಾಂಬ್ ಸ್ಫೋಟದ ಇಬ್ಬರು ಆರೋಪಿಗಳೊಂದಿಗೆ ಆಸ್ತಿ ವ್ಯವಹಾರದಲ್ಲಿ ತೊಡಗಿಕೊಂಡಿರುವುದಾಗಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ(ನವೆಂಬರ್ 09) ಆರೋಪಿಸಿದ್ದಾರೆ.

Advertisement

ಭೂಗತಪಾತಕಿಗಳಿಂದ ನವಾಬ್ ಮಲಿಕ್ ಅವರು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿರುವುದಾಗಿ ದೂರಿದ್ದಾರೆ. ಮಲಿಕ್ ಕುಟುಂಬದ ಒಡೆತನದ ಕಂಪನಿ ಕುರ್ಲಾದಲ್ಲಿ ಪ್ರಮುಖ ಆಸ್ತಿಯನ್ನು ಖರೀದಿಸಿರುವುದಾಗಿ ವರದಿ ವಿವರಿಸಿದೆ.

ಈ ಆಸ್ತಿಯನ್ನು 1993ರ ಬಾಂಬೆ ಸ್ಫೋಟದ ಆರೋಪಿಗಳಾದ ಸಲೀಂ ಪಟೇಲ್ ಮತ್ತು ಸರ್ದಾರ್ ಸಾಹಬ್ ಅಲಿ ಖಾನ್ ಮೂಲಕ ಕಡಿಮೆ ಬೆಲೆಗೆ ಖರೀದಿಸಿರುವುದಾಗಿ ದೂರಿದ್ದು, ಈ ವ್ಯವಹಾರ 2003 ಮತ್ತು 2005ರಲ್ಲಿ ನಡೆದಿರುವುದಾಗಿ ತಿಳಿಸಿದೆ.

ಭೂ ಕಬಳಿಕೆಯ ಜಾಲದ ರೂವಾರಿ ಸಲೀಂ ಪಟೇಲ್ ಮತ್ತು ಭೂಗತಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಎಂದು ಫಡ್ನವೀಸ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next