Advertisement

ಮಾರಿಕಾಂಬಾ ದೇವಸ್ಥಾನದಲ್ಲಿ ನಾಳೆಯಿಂದ ನವರಾತ್ರಿ

07:31 PM Oct 06, 2021 | Team Udayavani |

ಶಿರಸಿ: ರಾಜ್ಯದ ಶಕ್ತಿ ದೇವತೆ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.7 ರಿಂದ 15ರವರೆಗೆ ನಡೆಯಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಸರಳವಾಗಿ ಆಚರಿಸುವ ನಿಯಮ ಇರುವುದರಿಂದ ನವರಾತ್ರಿ ಉತ್ಸವದ ಧಾರ್ಮಿಕ ಪದ್ಧತಿಯಂತೆ ಮಾತ್ರ ಸೀಮಿತವಾಗಿ ನಡೆಸಲಾಗುತ್ತಿದೆ.

Advertisement

ನವರಾತ್ರಿ ಸಮಯದಲ್ಲಿ ಸಪ್ತಶತಿ ಪಾರಾಯಣ 151 ರೂ., ಪಲ್ಲವ ಪಾರಾಯಣ 251 ರೂ.ರಂತೆ ಪಾವತಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಪಾರಾಯಣ ಪೂಜೆ ಮಾಡಿಸುವವರಿಗೆ ನೇರವಾಗಿ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ರಸೀದಿ ಮಾಡಿಸಿದವರ ಹೆಸರಿನಲ್ಲಿ ಸಂಕಲ್ಪ ಮಾಡಿ ಪೂಜೆ ಮಾಡಲಾಗುವುದು. ಪಾರಾಯಣ ಪೂಜೆಯ ಪ್ರಸಾದವನ್ನು ಆಯಾ ದಿನದಂದು ಮಧ್ಯಾಹ್ನ 1 ರಿಂದ ರಾತ್ರಿ 8ರೊಳಗೆ ಕೌಂಟರಿನಲ್ಲಿ ರಸೀದಿ ನೀಡಿ ಪಡೆಯಬಹುದಾಗಿದೆ.

ಪ್ರತಿದಿನ ಎಂದಿನಂತೆ ಉಡಿ, ಮಹಾಪೂಜೆ, ಪುಷ್ಪಾಲಂಕಾರ ಪೂಜೆ, ತುಲಾಭಾರ, ಹರಕೆ, ಕಾಣಿಕೆ ಅರ್ಪಣೆ ಸೇವೆ ಮಾತ್ರ ನಡೆಯುತ್ತದೆ. ಶಾಶ್ವತವಾಗಿ ನಡೆಯುವ ಭಕ್ತಕೋಟಿ, ನಿರಂತರ, ನಿತ್ಯಸೇವೆ ಪೂಜೆಯು ಎಂದಿನಂತೆ ನಡೆಯುವುದು. ಈ ಸೇವೆಗೆ ಭಕ್ತಾದಿಗಳು ಸೀಮಿತ ಸಂಖ್ಯೆಯಲ್ಲಿ ಆಗಮಿಸಿ ಸಾಮಾಜಿಕ ಅಂತರ ಕಾಯ್ದು ಪೂಜೆ ಸಲ್ಲಿಸಿ ಪ್ರಸಾದ ಪಡೆಯಬಹುದಾಗಿದೆ. ವಿಜಯದಶಮಿ ಆಚರಣೆ ಅ.15 ರಂದು ನಡೆಸಲಾಗುವುದು. ಅಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಹನುಮಂತ ದೇವರ ಪಲ್ಲಕ್ಕಿಯು ಸಾಯಂಕಾಲ ನಗರದಲ್ಲಿ ಸಂಚರಿಸಲಿದೆ.

ರಾತ್ರಿ 10ರ ನಂತರ ಕೋಟೆಕೆರೆ ಗದ್ದುಗೆ ಮೇಲೆ ಮಾರಿಕಾಂಬಾ ದೇವಿ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ ಪಡಿಯಾಟ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆರ್‌.ಜಿ. ನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next