Advertisement

BJP; ನವಜೋತ್ ಸಿಂಗ್ ಸಿಧು ಮತ್ತೆ ಬಿಜೆಪಿ ಸೇರ್ಪಡೆ ಸಾಧ್ಯತೆ

09:42 PM Feb 17, 2024 | Team Udayavani |

ಚಂಡೀಗಢ: ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ತೊರೆಯುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಪ್ರಶ್ನೆಗೆ ನಾಳೆ ಅಂದರೆ ಫೆಬ್ರವರಿ 18 ರಂದು ಉತ್ತರ ಸಿಗುವ ಸಾಧ್ಯತೆಗಳಿವೆ.

Advertisement

ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಊಹಾಪೋಹಗಳು ಕೆಲ ದಿನಗಳಿಂದ ಇತ್ತು. ಈಗಾಗಲೇ ಪಂಜಾಬ್ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಗಳಿಗೆ ಹಾಜರಾಗದ ಕಾರಣ ಅವರಿಗೆ ಕಾಂಗ್ರೆಸ್ ನೋಟಿಸ್ ಸಹ ನೀಡಿದೆ. ಪಂಜಾಬ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸಮಾವೇಶದ ನಂತರ ನವಜೋತ್ ಸಿಂಗ್ ಸಿದ್ದು ಈಗ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.

”ಮಧ್ಯಾಹ್ನ 12.15 ಕ್ಕೆ ನನ್ನ ಪಟಿಯಾಲ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತೇನೆ.  ರೈತರ ಸಮಸ್ಯೆಗಳ ಕುರಿತ ಈ ಸುದ್ದಿ ಗೋಷ್ಠಿಗೆ ಎಲ್ಲರಿಗೂ ಆಹ್ವಾನ…” ಎಂದು ಸಿಧು ಪೋಸ್ಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ, ಫೆಬ್ರವರಿ 22 ರ ನಂತರ ಸಿಧು ಜತೆಗೆ 3 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಬಹುದು ಎಂದು ವರದಿಯಾಗಿದೆ.

2004 ರಲ್ಲಿ ಅಮೃತಸರ ಕ್ಷೇತ್ರದಿಂದ ಸಿಧು ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದರು. ಅವರ ವಿರುದ್ಧ ನ್ಯಾಯಾಲಯದ ಮೊಕದ್ದಮೆಯಿಂದಾಗಿ ಅವರು ರಾಜೀನಾಮೆ ನೀಡಿದ ನಂತರ, ತೀರ್ಪಿಗೆ ತಡೆ ನೀಡಿದ ನಂತರ ಅವರು ಮತ್ತೆ ನಿಂತು ಗೆದ್ದಿದ್ದರು.

Advertisement

2017ರಲ್ಲಿ ಸಿಧು ಕಾಂಗ್ರೆಸ್ ಸೇರಿದ್ದರು. ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಅಮೃತಸರ ಪೂರ್ವದಿಂದ ಸ್ಪರ್ಧಿಸಿ ಗೆದ್ದರು.ಸಂಪುಟ ದರ್ಜೆ ಸಚಿವರಾಗಿದ್ದರು.

18 ಜುಲೈ 2021 ರಂದು, ಶ್ರೀ ಸುನಿಲ್ ಜಾಖರ್ ಬದಲಿಗೆ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. 2021 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಧು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜೀವನ್ ಜ್ಯೋತ್ ಕೌರ್ ವಿರುದ್ಧ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next