Advertisement
ನ. 18 ರಂದು ಸಂಜೆ ನೆರೂಲ್ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ನಡೆದ ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ಇದರ 27 ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಶ್ರೀ ಶನೀಶ್ವರ ಮಂದಿರದ ಅಂಗಸಂಸ್ಥೆಯಾದ ರಂಗಭೂಮಿ ಫೈನ್ ಆರ್ಟ್ಸ್ ಕಳೆದ 27 ವರ್ಷ ಗಳಿಂದ ಅನೇಕ ಕಲಾವಿದರನ್ನು ಸೃಷ್ಟಿಸಿದೆ. ತಾಳಮದ್ದಳೆ, ಯಕ್ಷಗಾನ, ನಾಟಕೋತ್ಸವಗಳ ಮೂಲಕ ಸಾಂಸ್ಕೃತಿಕ ವೈಭವಗಳನ್ನು ಅನಾವರ ಣಗೊಳಿಸಿದೆ. ಜಾತ್ರೆ ಗಳಿಗಿಂತಲೂ ಅಪಾರ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು ಕಲಾವಿದರನ್ನು ಪ್ರೋತ್ಸಾಹಿಸಿ ಗೌರವಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನುಡಿದು ಶುಭಹಾರೈಸಿದರು.
Related Articles
Advertisement
ವೇದಿಕೆಯಲ್ಲಿ ತಲೋಜಾ ಭಾರತ್ ಕೋಚ್ ಬಿಲ್ಡರ್ನ ನಿರ್ದೇಶಕ ಸದಾಶಿವ ಶೆಟ್ಟಿ, ನೆರೂಲ್ ಶ್ರೀ ಮಣಿಕಂಠ ಸೇವಾ ಸಂಘದ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ, ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಬಂಗೇರ, ತುಳುಕೂಟ ಐರೋಲಿಯ ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರ್, ರಾಜೇಶ್ ಗೌಡ, ಮೀರಾ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಸದಸ್ಯರುಗಳಾದ ರೂಪಾ ಡಿ. ಶೆಟ್ಟಿ, ಅನಿಲ್ ಕುಮಾರ್ ಹೆಗ್ಡೆ, ರಘು ಮೂಲ್ಯ, ಉಷಾ ಶೆಟ್ಟಿ, ಆದ್ಯಪಾಡಿಗುತ್ತು ಕರುಣಾಕರ ಎಸ್. ಆಳ್ವ, ಜಗದೀಶ್ ಶೆಟ್ಟಿ ಬೆಳ್ಕಲೆ, ಕೃಷ್ಣ ಕೋಟ್ಯಾನ್, ನಿತೇಶ್ ಶೆಟ್ಟಿ, ಗೀತಾ ಎಸ್. ಶೆಟ್ಟಿ ತಾರಾ ಕೆ. ಶೆಟ್ಟಿ ಮೊದಲಾದವರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಸದಸ್ಯರಿಂದ, ಪರಿಸರದ ವಿವಿಧ ಸಂಘ-ಸಂಸ್ಥೆಗಳಿಂದ ನೃತ್ಯ ವೈವಿಧ್ಯ ನಡೆಯಿತು. ಪ್ರಕಾಶ್ ಶೆಟ್ಟಿ ಧರ್ಮ ನಗರ ರಚಿಸಿ, ಸತೀಶ್ ಎರ್ಮಾಳ ಸಹಕಾರದೊಂದಿಗೆ, ಅನಿಲ್ ಕೆ. ಹೆಗ್ಡೆ ಅವರ ನಿರ್ದೇಶನದಲ್ಲಿ ರಂಗಭೂಮಿ ಕಲಾವಿದರಿಂದ ಏರೆಗ್ಲಾ ಪನೊಡಿc ತುಳು ನಾಟಕ ಪ್ರದರ್ಶನಗೊಂಡಿತು.
ಶ್ರೀ ಶನೀಶ್ವರ ಮಂದಿರ ನೆರೂಲ್, ಶ್ರೀ ಮೂಕಾಂಬಿಕಾ ಮಂದಿರದ ಘನ್ಸೋಲಿ, ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ಹಾಗೂ ನವಿಮುಂಬಯಿ ಪರಿಸರದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ನೂರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ: ರಮೇಶ್ ಅಮೀನ್